Showing posts with label ಶ್ರೀಗುರುಪದಯುಗ ಸ್ಮರಿಸುವೆ ರಾಗಾದಿ ಪ್ರತಿದಿನ shreekara vittala. Show all posts
Showing posts with label ಶ್ರೀಗುರುಪದಯುಗ ಸ್ಮರಿಸುವೆ ರಾಗಾದಿ ಪ್ರತಿದಿನ shreekara vittala. Show all posts

Monday, 6 September 2021

ಶ್ರೀಗುರುಪದಯುಗ ಸ್ಮರಿಸುವೆ ರಾಗಾದಿ ಪ್ರತಿದಿನ ankita shreekara vittala

 ankita ಶ್ರೀಕರವಿಠಲ  

ರಾಗ: ಜಯಜಯವಂತಿ ತಾಳ: ತೀನ್/ತ್ರಿ

ಶ್ರೀ ಗುರುಪದಯುಗ ಸ್ಮರಿಸುವೆ

ರಾಗಾದಿ ಪ್ರತಿದಿನ

ಯೋಗಿಗಳರಸನಿವ ಶಿರ

ಬಾಗಿದವರ ಪೊರೆವ ಅ.ಪ

ಕೋಲಜತಟಸದನ ಸುವಿಶಾಲ ಮಹಿಮೆಯುತನ

ಆಲಿಸಿ ಮೊರೆಕೇಳ್ವನ ಬಲು ಮೇಲು ಕರುಣಿ ಇವನ 1

ಬಂಡಿಯಬೋವನ ಒಲಿಸಿಕೊಂಡ ಸುಯತಿವರನ

ತೊಂಡರ ಪೊರೆಯುವನ ಭೂಮಂಡಲದೊಳು ಖ್ಯಾತನ 2

ದೂತಶ್ರೀಕರವಿಠಲನಿಜವೀತಾನು ಗುಣಶೀಲ

ದಾತಾನು ಅನುಗಾಲ ನಮಗೀತಾನೆ ಬೆಂಬಲ 3

***