Showing posts with label ಕಣ್ಣು ಮುಚ್ಚೆನ್ನಾ ಆಡಿಸೆಸಣ್ಣವರನ್ನು pranesha vittala. Show all posts
Showing posts with label ಕಣ್ಣು ಮುಚ್ಚೆನ್ನಾ ಆಡಿಸೆಸಣ್ಣವರನ್ನು pranesha vittala. Show all posts

Monday, 11 November 2019

ಕಣ್ಣು ಮುಚ್ಚೆನ್ನಾ ಆಡಿಸೆಸಣ್ಣವರನ್ನು ankita pranesha vittala

by ಪ್ರಾಣೇಶದಾಸರು
ಕಣ್ಣು ಮುಚ್ಚೆನ್ನಾ ಆಡಿಸೆಸಣ್ಣವರನ್ನು ಹೊರಗಡಗಿಸೆ ಪ  

ಗಟ್ಟಿ ಹುಡುಗರು ಅವರೆಲ್ಲಮಟ್ಟ ಮಾಯಾಗಿ ಹೋದರು ||ಥಟ್ಟನೆದ್ದು ಯನ್ನ ಕೈಯವರಮುಟ್ಟಿಸದಿರೆ ಬಿಡೆ ನಿನ್ನ 1

ಪಾಯಿಸ ಹೋಳಿಗೆ ಮಾಡಿಬಾಯಿಗೆ ಕೈದೋರೆಗೋಪಿ||ನಾಯೆರುವಿನೆ ನಿನ್ನ ತಲೆಗೆನೀ ಯೆರಕೊಳ್ಳ ಒಲ್ಲೆನೆನ್ನೆ 2

ಅಣ್ಣನ ರಂಬಿಸಿ ಕರೆದುಹಣ್ಣುಗಳವಗೆ ಕೊಡಬೇಡೆ ||ಚಿನ್ನದ ಗೊಂಬೆ ಬಾ ಎಂದುಬಣ್ಣ ಬಣ್ಣದಲೆನ್ನ ಕರೆಯ 3

ನೀ ಹಾರ ಮಗನೆಂದುಕೇಳಿಮೇದಿನಿಯೊಳು ನಾ ಹೆಚ್ಚೆನ್ನೆ ||ಹೋದಬಾರಿಹೊಟ್ಟಿಗೆಮಾರಿಹೋದಳೂ ನಿಮ್ಮಮ್ಮನೆನೆ 4

ಯನಗೆ ಪಾಪ ನೀನಾಗಿತಿನಲಿಕ್ಕಪ್ಪಚ್ಚಿ ಬೇಡೇ ||ಮಣಿಗುಂಡೆನಗೆ ಕೊಡುಯೆಂದುಮುನಸುಗುಟ್ಟೆನ್ನನು ಕಾಡೇ 5

ದೃಷ್ಟಿ ತಾಕಿತು ಮಗಗೆಂದುಕಟ್ಟಿಸೆ ಯಂತ್ರ ಇನ್ನೊಮ್ಮೆ ||ಕೊಟ್ಟು ಅಮ್ಮಿಯ ರಂಬಿಸಿತೊಟ್ಟಿಲೊಳಗಿಟ್ಟು ತೂಗೇ 6

ಏನು ಪುಣ್ಯ ಮಾಡಿದೆನೋಕ್ಷೋಣಿಗೆ ಹತಾರ್ಥವಾಗಿ ||ಪ್ರಾಣೇಶ ವಿಠಲನು ನಿನ್ನತಾನೇ ಕೊಟ್ಟನು ಯನಗೆನ್ನ 7
*********