ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಸಂಧಿಸಿ ಧರ್ಮ ಭೇದಸಿ ಗುರುವರ್ಮ ಶೋಧಿಸಿ ನೋಡಲಿಕ್ಕೆ ಛೆÉೀದಿಸಿಹೋಗುದು ಭವಕರ್ಮ P
ಕಾಣಾದ ಕಾಣಬ್ಯಾಡಿ ಕಾಣಿಸುವದು ನೋಡಿ ಕಾಣಿಸಿ ಕಾಣಗೊಡದಿಹ್ಯದ ಖೂನ ನಿಜಮಾಡಿ 1
ದೋರದ ನೋಡಬ್ಯಾಡಿ ದೋರಿಸುವದು ನೋಡಿ ದೋರಿಸಿದೋರಗುಡದಿಹುದ ಖೂನ ನಿಜಮಾಡಿ 2
ಕೇಳದ ಕೇಳಬ್ಯಾಡಿ ಕೇಳಿಸುವದ ನೋಡಿ ಕೇಳಿಸಿ ಕೇಳೆಗೊಡದಿಹುದ ಖೂನ ನಿಜಮಾಡಿ 3
ಆಡದ ನೋಡಬ್ಯಾಡಿ ಅಡಿಸುವದ ನೋಡಿ ಅಡಿಸಿ ಆಟ ನೋಡಗೂಡದ ಖೂನ ನಿಜಮಾಡಿ 4
ನುಡದ ನೋಡಬ್ಯಾಡಿ ನುಡಿಸುವದ ನೋಡಿ ನುಡಿಸಿ ನುಡಿ ತಿಳಿಯಗುಡದ ಖೂನ ನಿಜಮಾಡಿ 5
ಮಾಡದ ನೋಡಬ್ಯಾಡ ಮಾಡಿಸೂವದ ನೋಡಿ ಮಾಡಿಸಿ ಮಾಡದೋರಗುಡದ ಖೂನ ನಿಜಮಾಡಿ 6
ತಿಳುಹದ ನೋಡಬ್ಯಾಡಿ ತಿಳುಹಿಕುಡದ ನೋಡಿ ತಿಳುವಿಸುವದ ತಿಳುವದೆ ಮಹಿಪತಿವಸ್ತ ನೋಡಿ7
***