Showing posts with label ಬಾರೋ ಶ್ರೀಹರಿ ಶೌರಿ ಬಾರೋ ಭಕ್ತರ ದೊರೆ kamalanabha vittala. Show all posts
Showing posts with label ಬಾರೋ ಶ್ರೀಹರಿ ಶೌರಿ ಬಾರೋ ಭಕ್ತರ ದೊರೆ kamalanabha vittala. Show all posts

Thursday, 5 August 2021

ಬಾರೋ ಶ್ರೀಹರಿ ಶೌರಿ ಬಾರೋ ಭಕ್ತರ ದೊರೆ ankita kamalanabha vittala

 ..

kruti by Nidaguruki Jeevubai

ಬಾರೋ ಶ್ರೀಹರಿ ಶೌರಿ ಬಾರೋ ಭಕ್ತರ ದೊರೆ

ಬಾರೋ ಬಾಬಾ ಮನೆಗೆ ಪ


ಚಾರುತರ ನವರತುನದ ಶೃಂ-

ಗಾರ ರಥದೊಳು ಕುಳಿತು ಬೇಗನೇ

ಭೇರಿ ವಾದ್ಯಗಳೆಲ್ಲ ಮೊಳಗಲು

ನಾರಿ ರುಕ್ಮಿಣಿ ಭಾಮೆ ಸಹಿತಅ.ಪ


ಸುರರು ಅಸರರು ಕೂಡಿ ಶರಧಿಯ ಮಥಿಸಲು

ಭರದಿ ಪುಟ್ಟಲು ಸುಧೆಯು

ಪರಮ ಹರುಷದಿಂದ ದೊರಕಿತಮೃತವೆಂದು

ಅಸುರರೆಲ್ಲರು ಬರಲು

ಬೆರಗಾಗಿ ಸುರರೆಲ್ಲ ಉಪಾಯವನರಿಯದೆ

ಗಗನ ನೋಡುತಿರಲು

ತ್ವರದಿ ಶ್ರೀಹರಿ ಅವರ ನೋಡುತ

ಪರಿಪರಿಯ ಆಭರಣ ಪೀತಾಂ-

ಬರಗಳಿಂದಲಂಕರಿಸಿ ಸುಂದರ

ತರುಣಿ ರೂಪವ ಭರದಿತಾಳಿದೆ 1


ಹರಿಯ ಸ್ತ್ರೀರೂಪವ ಪರಶಿವ ಸ್ಮರಿಸುತ

ಮರಳಿ ನೋಡಲಪೇಕ್ಷಿಸೆ

ಪರಿ ಪರಿ ಪ್ರಾರ್ಥಿಸೆ ಪರಮಾತ್ಮ ನುಡಿದನು

ಇದುತರವಲ್ಲೆನುತ

ಉರಗ ಭೂಷಣನ ಪ್ರಾರ್ಥನೆ ಸಲಿಸುವೆನೆಂದು

ತರುಣಿಯಾದನು ಹರಿಯು

ಪರಮಸೂಕ್ಷ್ಮದ ವಸನ ವಡ್ಡ್ಯಾ-

ಣಗಳಲಂಕರಿಸುತ್ತ ವನದೊಳು

ಚರಿಸುತಿರೆ ಹರ ಬೆರಗಾಗಿ ಹಿಂದೋ-

ಡುತಲಿ ಬರೆ ಮರೆಯಾದ ದೇವನೆ 2


ಹಿಂದೆ ದೈತ್ಯನು ಬಹುಚಂದದಿ ತಪಗೈದು

ಕಂದುಗೊರಳನ ಮೆಚ್ಚಿಸೇ

ಬಂದನಾಗಲೇ ಶಂಭು ಇಂದುವರ ಬೇಡೆನಲು

ವಂದಿಸಿ ಬೇಡಿದ ವರವ ತಾನು

ಅಂದು ವರಗಳ ಕೊಟ್ಟು ಹಿಂದಿರುಗಲು ಶಿವನು

ಹಿಂದೆ ಬೆನ್ನಟ್ಟಿದ ರಕ್ಕಸನೂ

ಹಿಂದÀುರಗದಲೆ ಓಡುತಲೆ ಶ್ರೀ

ತಂದೆ ಕಮಲನಾಭ ವಿಠ್ಠಲ

ನೆಂದು ಮೊರೆಯಿಡೆ ಕೇಳಿ ತ್ವರದಲಿಬಂದು ರಕ್ಷಿಸಿ ಕಾಯ್ದ ಶ್ರೀಹರಿ 3

***