ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕೆ ಬಾರನೇ ರಂಗಯ್ಯ ಯಾಕೆ ಬಾರನೇ | ಲೋಕವೀರೇಳು ವ್ಯಾಪಕ ಸುಖವವಿರಲು ಮನೆಗೆ ಪ
ಸ್ಮರನ ಬಾಣದ ಮೊನಿಗೆ | ಗುರಿಯಮಾಡಿ ತಾಯೆನೆಗೆ | ಸಾರುವರೇ ಎನ್ನಗಲಿ ತರಳೆಯಂದರುವುತಲಿ 1
ಕಡೆಗೆ ಕರುಣಾಳು ನಮ್ಮ ವಡಿಯಾನೊಳೂ ತಪ್ಪಿಲ್ಲಮ್ಮಾ | ಪೊಡವಿಲೆ ಪೆಣ್ಣೊಡಲೆ ವಿಡಿಯಬಾರದು ಬಾಲೆ 2
ಎನ್ನ ಮನಾ ಎನೊಲ್ಲದು ಕಣ್ಣಿಗೆ ನಿದ್ರೆಬಾರದು | ಸನ್ನುತ ಮಹಿಪತಿ ಪ್ರೀಯಾ 3
***