Showing posts with label ಶ್ರೀರಘುಪ್ರೇಮ ಗುರುವರ್ಯರ lakumeesha raghuprema teertha stutih. Show all posts
Showing posts with label ಶ್ರೀರಘುಪ್ರೇಮ ಗುರುವರ್ಯರ lakumeesha raghuprema teertha stutih. Show all posts

Wednesday 1 September 2021

ಶ್ರೀರಘುಪ್ರೇಮ ಗುರುವರ್ಯರ ankita lakumeesha raghuprema teertha stutih

 " ಶ್ರೀ ಲಕುಮೀಶಾಂಕಿತ ಶ್ರೀ ಕುರಡಿ ರಾಘವೇಂದ್ರಾಚಾರ್ಯರು "

ರಾಗ : ಹಂಸಾನಂದಿ        ತಾಳ : ಆದಿ 


ಶ್ರೀ ರಘುಪ್ರೇಮ ಗುರುವರ್ಯರ ಪದ ।

ವಾರಿಜಗಳ ಭಜಿಸೋ

ಸಂತತ ಸುಖಿಸೋ ।। ಪಲ್ಲವಿ ।।

ಆರರ ಬಾಧೆಗಳ್ದೂರೋಡಿಸಿ ಬಲು ।

ಘೋರ ದುರಿತಗಳ್ತರಿವಾ

ಸುಖ ಈತ ಗರೆವಾ ।। ಅ ಪ ।।

ರಾಯಚೂಟಿಲಿ ಜನಿಸಿ ತ್ವರಿತದಿ ।

ತಾಯಿಹೀನ ನೆನಿಸಿ ।

ಮಾಯಗಾತಿ ಸಾಕು

ತಾಯಿಯು ಗೋಳಿಡೆ ।।

ಕಾಯ ಕ್ಲೇಶ ಪಟ್ಟಾ ಹರಿ

ಮೊರೆಯಿಟ್ಟಾ ।। ಚರಣ ।।

ವೆಂಕಟೇಶನೊರದಿ ಜನ್ಮತಾಳಿ ।

ವೆಂಕಟ ನಾಮದೀ ।

ಸಂಕಟ ನಾನಾ ಕಂಟಕದಲಿ । ವೈ ।

ಕುಂಠನ ಕೃಪೆ ಪಡೆದಾ

ವ್ರತಧಾರಿಯಾದ ।। ಚರಣ ।।

ಸಕಲ ಕ್ಷೇತ್ರ ಚರಿಸೀ ತೀರ್ಥಾದೀ ।

ಬಕವೈರಿ ಶಾಸ್ತ್ರ ಗ್ರಹಿಸೀ ।

ಮುಕುತಿಯ ಶಾಶ್ವತ ಸುಖಕೇ ಸೇವಿಸೇ ।

ಅಖಿಲ ಜೀವೇಶನೊಲಿದಾ

ಹಂಪೆಲಿ ನಲಿದಾ ।। ಚರಣ ।।

ಹತ್ತಿಬೆಳೆಗಲ್ಗೆ ಬಂದೂ ಅರಳೀಕಟ್ಟೀ ।

ಉತ್ತಮಾರ್ಯರಲಿ ನಿಂದೂ ।

ಭಕ್ತಿಲಿ ಇವರ ನಿತ್ಯವೂ ಸೇವಿಸೇ ।

ನಿತ್ಯ ತೃಪ್ತನೊಲಿದಾ

ಯದುಗಿರಿಗೆ ಬಂದಾ ।। ಚರಣ ।।

ತೋಷದಿ ಪತ್ನಿಯ ಕೂಡೀ ಸಂತತ ।

ಭಾಸುರ ವ್ರತ ನೇಮ ಮಾಡಿ ।

ಭಾಸುರರಿಗೆ ದಿವ್ಯ ವಾಸಕೆ ಗೃಹ ವಸ್ತು ।

ರಾಶಿ ಸರ್ವಸ್ವ ನೀಡ್ದಾ

ಹರಿಕೃಪೆ ಪಡೆದಾ ।। ಚರಣ ।।

ಆದವಾನಿಯಲ್ಲಿ ಸೀತಾರಾಮರ ।

ಮೋದದಿ ಸ್ಥಾಪಿಸಿಲ್ಲೀ ।

ಸಾಧುವರ್ಯ ರಘುದಾಂತತೀರ್ಥರಿಂದಾ ।

ಕರೋದ್ಭವನೀತಾ - 

ಮಳಖೇಡದೀತಾ ।। ಚರಣ ।।

ಸಕಲ ಸುಖವ ಗರೆವಾ

ಇವರನು ನಂಬಲು ।

ಲಕುಮೀಶನೇ ಒಲಿವಾ ।

ಮುಕುತಿಯ ಪಥ ತೋರಿ

ವಿಕಸಿತ ಮನವಿತ್ತು ।

ಯುಕುತಿ ಧ್ಯಾನವೀವ

ಭಕುತರ ಪೊರೆವಾ ।। ಚರಣ ।। 

***