Showing posts with label ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲರಮಾ kamalanabha vittala. Show all posts
Showing posts with label ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲರಮಾ kamalanabha vittala. Show all posts

Friday 27 December 2019

ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲರಮಾ ankita kamalanabha vittala

by ನಿಡಗುರುಕಿ ಜೀವೂಬಾಯಿ
ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲರಮಾ ಬ್ರಹ್ಮಾದಿಗಳು ಪೊಗಳೆ ಪ

ಉಮೆಯರಸ ನಿನ್ನ ಚರಣಮಹಿಮೆ ತನ್ನತರುಣಿಯೊಡನೆ ಹಗಲಿರುಳು ಪೇಳುವ ದಿವ್ಯ ಅ.ಪ

ರಿಯದೆ ಅಜಮಿಳತರಳನಾರಗನೆಂದುಮರಣ ಕಾಲದಿ ಒದರೆಸರಸೀಜಾಕ್ಷನು ತನ್ನ ಪರಿವಾರದವರೆಂದುಸಿರಿದೇವಿಯೊಳು ಪೇಳಿ ತ್ವರಿತದಿ ರಕ್ಷಿಸಿದ 1

ನಕ್ರನ ಬಾಧೆಗೆ ಸಿಕ್ಕಿದ ಗಜರಾಜಚಕ್ರಪಾಣಿಯ ಭಜಿಸೆಆ ಕ್ಷಣದಿ ತನ್ನ ಚಕ್ರಕಾಙÉÕಯ ಮಾಡಿಲಕ್ಷ್ಮೀದೇವಿಗ್ಹೇಳದೆ ಪಕ್ಷಿ ಹೆಗಲೇರಿ ಬಂದ 2

ಹಿರಣ್ಯಕಶ್ಯಪು ತನ್ನತರಳಪ್ರಹ್ಲಾದನಿಗೆಪರಿಪರಿ ಬಾಧೆ ಪಡಿಸೆಹರಿಯ ತೋರೆಂದು ಆರ್ಭಟಿಸಿ ನುಡಿಯೆ ದೈತ್ಯನರಮೃಗರೂಪನಾಗಿ ಭರದಿ ಕಂಬದಿ ಬಂದ3

ಪತಿಗಳೈವರು ಲಕ್ಷ್ಮೀಪತಿಯ ಧ್ಯಾನದೊಳಿರೆಮತಿಹೀನನೆಳೆತರಲುಗತಿನೀನಲ್ಲದೆ ಮತ್ತೆ ಹಿತರೊಬ್ಬರಿಲ್ಲವೆನೆಅತಿಬೇಗದಿಂದ ಧರ್ಮಸತಿಗೆ ಅಕ್ಷಯವಿತ್ತ 4

ಇದರಂತೆ ತರಳಧ್ರÀುವ ಒದಗಿದ ತಾಪದಿಂದಪದುಮನಾಭನÀ ಭಜಿಸೆಮುದದಿಂದಾತಗೆ ಧ್ರುವಪದವಿಯನಿತ್ತು ಕಾಯ್ದೆಪದುಮನಾಭನೆ ನಿನಗೆದುರುಂಟೆ ತ್ರಿಜಗದಿ 5

ಘಣಿಶಾಯಿ ನಿನ್ನಗುಣಮಹಿಮೆಯ ಪೊಗಳಲುಅಹಿಭೂಷಣನಿಗಳವೆಕ್ಷಣ ಬಿಡದಲೆ ನಿನ್ನ ಚರಣಸೇವೆಯ ಮಾಳ್ಪಸಿರಿದೇವಿ ಅರಿಯೆನೆಂದೆನಲು ನಿನ್ನಯಗುಣ6

ಕರುಣಾಸಾಗರ ದೇವ ವಿಮಲಸ್ವರೂಪನೆ ಕಮಲನಾಭ ವಿಠ್ಠಲಶರಣಜನರ ಬಹುತ್ವರದಿಂದ ಬಂದು ಕಾಯ್ದಪರಮದಯಾಳೊ ನಿನ್ನ ಚರಣಕ್ಕೆ ನಮೋ ಎಂಬೆ7
*******