Showing posts with label ಹರಿಹರಿ ಹರಿಯೆಂದು ಸ್ಮರಿಸುವ ಜನರಿಗೆ ದುರಿತವೆತ್ತಣ purandara vittala HARIHARI HARYENDU SMARISUVA JANARIGE DURITAVETTANA. Show all posts
Showing posts with label ಹರಿಹರಿ ಹರಿಯೆಂದು ಸ್ಮರಿಸುವ ಜನರಿಗೆ ದುರಿತವೆತ್ತಣ purandara vittala HARIHARI HARYENDU SMARISUVA JANARIGE DURITAVETTANA. Show all posts

Saturday, 4 December 2021

ಹರಿಹರಿ ಹರಿಯೆಂದು ಸ್ಮರಿಸುವ ಜನರಿಗೆ ದುರಿತವೆತ್ತಣ purandara vittala HARIHARI HARYENDU SMARISUVA JANARIGE DURITAVETTANA



ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ
ದುರಿತವೆತ್ತಣದು ದುರ್ಗತಿಯೆಲ್ಲಿ ಬಹುದು ||ಪ||

ಸ್ನಾನವೇತಕೆ ಸಂಧ್ಯಾಜಪತಪವೇತಕೆ
ಮೌನವೇತಕೆ ಮೇಲೆ ವ್ರತವೇತಕೆ
ಮಾನಸದಲಿ ವಿಷ್ಣುಪದ ಧ್ಯಾನಿಸುವ ಮಹಾ-
ಜ್ಞಾನಿಗಳ ಸಂಗಸುಖದೊಳಿರ್ಪರಿಗೆ ||

ಯಾತ್ರೆಯೇತಕೆ ಕ್ಷೇತ್ರತೀರ್ಥಗಳು ಮಾಡಲೇಕೆ
ಗೋತ್ರಧರ್ಮದ ಪುಣ್ಯಫಲವೇತಕೆ
ಸೂತ್ರದಿಂ ಜಗವ ಮೋಹಿಸುವ ಮುರಾರಿಯ
ಸ್ತೋತ್ರದಿಂ ಪೊಗಳಿ ಹಿಗ್ಗುವ ಭಾಗವತರಿಗೆ ||

ಅಂಗದಂಡನೆಯೇಕೆ ಆತ್ಮಘಾತದ ಒಂದು
ತಿಂಗಳ ಚಾಂದ್ರಾಯಣವು ಏತಕೆ
ಮಂಗಳಮೂರುತಿ ಪುರಂದರವಿಠಲನ್ನ
ಹಿಂಗದೆ ಅರ್ಚನೆ ಮಾಡುವ ಭಕುತರಿಗೆ ||
***

ರಾಗ ಶಂಕರಾಭರಣ ಆದಿತಾಳ (raga tala may differ in audio)

pallavi

hari hari hariyendu smarisuva janarige duritavettaNadu durgatiyelli bahudu

caraNam 1

snAnavetake sandhyA japa tapavetake maunavetake mEle vratavetake
mAnasadali viSNupada dhyAnisuva mahA jnAnigaLa sanga sukhadoLirparige

caraNam 2

yAtreyetake kSEtra tIrttangaLa mADalEke gOtra dharmada puNyavEtake
sUtradim jagava mOhisuva murAriya stOtradim pogaLi higguva bhAgavatarige

caraNam 3

angadaNDanEyake AtmakhAtada ondu tingaLa cAndrAyaNavu Etake
mangaLa mUruti purandara viTTalanna hingade arcane mADuva bhakutarige
***