Saturday 4 December 2021

ಹರಿಹರಿ ಹರಿಯೆಂದು ಸ್ಮರಿಸುವ ಜನರಿಗೆ ದುರಿತವೆತ್ತಣ purandara vittala HARIHARI HARYENDU SMARISUVA JANARIGE DURITAVETTANA



ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ
ದುರಿತವೆತ್ತಣದು ದುರ್ಗತಿಯೆಲ್ಲಿ ಬಹುದು ||ಪ||

ಸ್ನಾನವೇತಕೆ ಸಂಧ್ಯಾಜಪತಪವೇತಕೆ
ಮೌನವೇತಕೆ ಮೇಲೆ ವ್ರತವೇತಕೆ
ಮಾನಸದಲಿ ವಿಷ್ಣುಪದ ಧ್ಯಾನಿಸುವ ಮಹಾ-
ಜ್ಞಾನಿಗಳ ಸಂಗಸುಖದೊಳಿರ್ಪರಿಗೆ ||

ಯಾತ್ರೆಯೇತಕೆ ಕ್ಷೇತ್ರತೀರ್ಥಗಳು ಮಾಡಲೇಕೆ
ಗೋತ್ರಧರ್ಮದ ಪುಣ್ಯಫಲವೇತಕೆ
ಸೂತ್ರದಿಂ ಜಗವ ಮೋಹಿಸುವ ಮುರಾರಿಯ
ಸ್ತೋತ್ರದಿಂ ಪೊಗಳಿ ಹಿಗ್ಗುವ ಭಾಗವತರಿಗೆ ||

ಅಂಗದಂಡನೆಯೇಕೆ ಆತ್ಮಘಾತದ ಒಂದು
ತಿಂಗಳ ಚಾಂದ್ರಾಯಣವು ಏತಕೆ
ಮಂಗಳಮೂರುತಿ ಪುರಂದರವಿಠಲನ್ನ
ಹಿಂಗದೆ ಅರ್ಚನೆ ಮಾಡುವ ಭಕುತರಿಗೆ ||
***

ರಾಗ ಶಂಕರಾಭರಣ ಆದಿತಾಳ (raga tala may differ in audio)

pallavi

hari hari hariyendu smarisuva janarige duritavettaNadu durgatiyelli bahudu

caraNam 1

snAnavetake sandhyA japa tapavetake maunavetake mEle vratavetake
mAnasadali viSNupada dhyAnisuva mahA jnAnigaLa sanga sukhadoLirparige

caraNam 2

yAtreyetake kSEtra tIrttangaLa mADalEke gOtra dharmada puNyavEtake
sUtradim jagava mOhisuva murAriya stOtradim pogaLi higguva bhAgavatarige

caraNam 3

angadaNDanEyake AtmakhAtada ondu tingaLa cAndrAyaNavu Etake
mangaLa mUruti purandara viTTalanna hingade arcane mADuva bhakutarige
***

No comments:

Post a Comment