..
ಹರಿ ನಿನ್ನ ರೋಮ ಕೂಪದಲಿ ಜೀವಿಪಸರಸಿಜ ಭವಾಂಡ ಕೋಟಿಯಲಿ ಪ
ತುರುಗಿಪ್ಪ ಬ್ರಹ್ಮರುದ್ರಾದಿ ಜೀವರುಗಳುಹರಿ ನಿನ್ನ ಮಹಿಮೆಯ ಪೇರ್ಮೆಯ ಬಲ್ಲರೆ ಅ.ಪ.
ಅತ್ತಿಯ ಮರದಿಂದುದುರುವ ಫಲಂಗಳಮೊತ್ತದಲಿರುತಿಪ್ಪ ಮಶಕಂಗಳುಕತ್ತೆಯ ಬಳಗಗಳೆಲ್ಲವು ಕೂಡಿಕೊಂಡುಅತ್ತಿಯ ತರುವಿನಾದ್ಯಂತವ ಬಲ್ಲವÉ 1
ಐವತ್ತು ಕೋಟಿ ಯೋಜನ ವಿಸ್ತರವಾದಭೂವಲಯದ ತಮ್ಮ ಗೂಡಿನಲಿಆವಾಸವಾಗಿಪ್ಪ ಕ್ಷುದ್ರ ಪಿಪೀಲಿಕಜೀವರು ಧರಣಿಯ ಮೇರೆಯ ಬಲ್ಲರೆ 2
ನೊರಜು ಮೊದಲಾಗಿ ಗರುಡ ಪರಿಯಂತಪರಿಪರಿ ಜಾತಿಯ ಪಕ್ಷಿಗಳು ತೆರದಲಿ ಹಾರುವರಲ್ಲದೆ ಗಗನದ ಪರಿಣಾಮವೆಂತೆಂದು ಬಲ್ಲವೆ ಶ್ರೀ ಕೃಷ್ಣ3
***