Showing posts with label ಏನಾಯಿತೋ ನಿನಗೆ ಶ್ರೀಹರಿ ಹರಿ purandara vittala. Show all posts
Showing posts with label ಏನಾಯಿತೋ ನಿನಗೆ ಶ್ರೀಹರಿ ಹರಿ purandara vittala. Show all posts

Tuesday, 3 December 2019

ಏನಾಯಿತೋ ನಿನಗೆ ಶ್ರೀಹರಿ ಹರಿ purandara vittala

ರಾಗ ಶಂಕರಾಭರಣ. ಆದಿ ತಾಳ

ಏನಾಯಿತೋ ನಿನಗೆ ಶ್ರೀಹರಿ ಹರಿ ||ಪ||
ನಾನಿನ್ನೇನು ಮಾಡಲಿ ಕಂದ ||ಅ||

ಅಂಗಳದೊಳಗಾಡೋ ಗೋಪೀಕಂದಗೆ ಗ್ರಹ ಸೋಕಿ ಅಂಗಾರನಿಟ್ಟಳು ಗೋಪಿ ತಾ
ರಕ್ಷೆಯ ಕಟ್ಟಿದಳು ಅಂಗನೆ ಹರಿಯ ಕಂಡು ಗೋಪಿ ತಾ ಕಂಗೆಟ್ಟಳು ಆಗ ||

ಧೂಪ ಕಾಣಿಕೆಯನು ಕೊಂಡು ನೆರೆಮನೆ ಜಾಣೇರ ಜಾಣೆ ರಂಗಗೆ ಪೇಳೇ
ಆಕಾಶದ ಬೊಮ್ಮನೆ ಸೋಕಿಹುದು ಬೊಮ್ಮಗೆ ಆಹುತಿಯಕೊಟ್ಟರೆ ಗುಣವಾಗೋದು ನಿನ್ನ ಕಂದಗೆ ||

ಪೂತನಿಯ ಮೊಲೆಯನುಂಡು ಕೃಷ್ಣಯ್ಯ ತಾ ಭೀತಿಗೊಂಡನು ತಾಯೆ
ಐದು ಮೊಘೆಯ ತುಪ್ಪ ಬೇಗನೆ ಆಹುತಿಯ ಕೊಟ್ಟರೆ ಗುಣವಾಗೋದು ನಿನ್ನ ಕಂದಗೆ ||

ಐದು ಮಣ ಗೋಧಿಟ್ಟು ಐದು ಮೊಗೆಯ ತುಪ್ಪ ಪಡಿವವಳೆ ಬಡಿಸುತಿರೆ
ಕೃಷ್ಣಯ್ಯ ತಾ ಕಡೆಗಣ್ಣಿನಲಿ ನೋಡಿ ಬಡಿವಾಣ(ಹರಿವಾಣ?) ಬಳದುಂಡ ಬೊಮ್ಮ ಬಾಯಲಿ ಮಣ್ಣೆಂದ ||

ಸೃಷ್ಟಿಯೊಳಗಿಂಥಾ ಸ್ವಾಮಿ ಇಷ್ಟ ಮೂರುತಿ ಕಾಣೆ
ತೊಟ್ಟಿಲೊಳಗೆ ಮಲಗಿದ್ದ ಶ್ರೀಪುರಂದರವಿಠಲ ನಗುತಿದ್ದ ||
***


pallavi

EnAyitO ninage shrIhari hari

anupallavi

nAninnEnu mADali kanda

caraNam 1

angaLadoLagADO gOpIkandage graha sOki angAraniTTaLu gOpi tA
rakSeya kaTTIdaLu angane hariya kaNDu gOpi tA kangeTTaLu Aga

caraNam 2

dhUpa kANikeyanu koNDu neremane jANEra jANe rangage pELE
AkAshada bommane sOkihudu bommage Ahutiya koTTare guNavAgOdu ninna kandage

caraNam 3

pUtaniya moleyanuNDu krSNayya tA bhIti koNDanu tAye
aidu mogeya tuppa bEgane Ahudiya koTTare guNavAgOdu ninna kandage

caraNam 4

aidu maNa gOdhiTTu aidu mogeya tuppa paDivavaLe baDisutire
krSNayya tA kaDegaNNinali nODi baDivANa baLaduNDa bomma bAyali maNNenda

caraNam 5

shrSTiyoLagindA svAmi iSTa mUruti kANe toTTiloLage malagidda purandara viTTala nagutidda
***