Showing posts with label ರಾಜಕುಲ ವನರಾಶಿ ರಾಜರಾಜೇಶ್ವರಾ vijaya vittala. Show all posts
Showing posts with label ರಾಜಕುಲ ವನರಾಶಿ ರಾಜರಾಜೇಶ್ವರಾ vijaya vittala. Show all posts

Wednesday, 16 October 2019

ರಾಜಕುಲ ವನರಾಶಿ ರಾಜರಾಜೇಶ್ವರಾ ankita vijaya vittala

ವಿಜಯದಾಸ
ರಾಜಕುಲ ವನರಾಶಿ ರಾಜರಾಜೇಶ್ವರಾ |
ರಾಜೀವ ನಯನ ಯದುರಾಜ ಎಲೊ ಭಾಪುರೆ ಪ

ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ |
ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ |
ದುರಳ ಶಕಟಾಸುರನ ಚರಣ ದುಂಗುಟದಲ್ಲಿ |
ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ 1

ವ್ರಜ |
ಪುರವ ಪಾಲಿಸಿದೆ ಕಾಳಿಂಗನೈದು |
ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ |
ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ 2

ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ |
ಕರುಣದಿಂದಲಿ ನಿಜರೂಪ ತೋರಿ |
ಮುರಿದು ಧರಿಗೆ ವರಿಸಿದೆ ಕಂಸನ ಎಲೆ ಭಾಪುರೆ 3

ವನಧಿಯೊಳು ಪುರ ಬಿಗಿದು ಕಾಲಯವನನ ಸದೆದು |
ಅನಿಲ ಸುತನಿಂದ ಮಾಗಧನ ಕೊಲ್ಲಿಸಿ |
ವನಿತೆಯರ ಸೆರೆ ಬಿಡಿಸಿ ಸೂತತನವನೆ ವೊಹಿಸಿ |
ಫಲ್ಗುಣಗೆ ವಿಶ್ವರೂಪವ ತೋರಿದೆ ಎಲೊ ಭಾಪುರೆ 4

ಗುರು ಭೀಷ್ಮ ಶಲ್ಯ ಶಕುನಿ ಸುಬಲ ಭಗದತ್ತ |
ತರಣಿಸುತ ದುಶ್ಶಾಸ ಕೌರವೇಶಾ |
ಎರಡು ಬಲ ವ್ಯಾಜ್ಯದಲಿ ಭೂಭಾರನಿಳುಹಿ ಸಾ |
ವಿರ ತೋಳ ಖಳನ ಭಂಗಿಸಿದೆ ಎಲೊ ಭಾಪುರೆ5

ದ್ವಾರಕಾಪುರದಲ್ಲಿ ನಾರದಗೆ ಸೋಜಿಗವ |
ತೋರಿದೆ ಒಬ್ಬೊಬ್ಬ ನಾರಿಯಲಿ |
ನಾರಿಯರ ಕೂಡ ಬಲು ಕ್ರೀಡೆಗಳನಾಡಿ ಅ |
ವರ ಸಂತಾನವನು ಪಡದೆ ಎಲೊ ಭಾಪುರೆ 6

ವರ ಚಂದ್ರಹಾಸ ಮಿಗಿಲಾದ ಭೂಪಾಲಕರ |
ಕರೆಸಿ ಪಾಂಡುವರ ಯಾಗವನೆ ಮುಗಿಸಿ |
ಹರುಷದಲಿ ಯದುಕುಲವಾಸ ಮಾಡಿದೆ |
ಪರಮ ಪುರುಷ ವಿಜಯವಿಠ್ಠಲನೆ ಎಲೆ ಭಾಪುರೆ 7
********