Showing posts with label ವರದೇಂದ್ರ ಯತಿ ಚಕ್ರವರ್ತಿ jagannatha vittala varadendra teertha stutih. Show all posts
Showing posts with label ವರದೇಂದ್ರ ಯತಿ ಚಕ್ರವರ್ತಿ jagannatha vittala varadendra teertha stutih. Show all posts

Friday, 27 December 2019

ವರದೇಂದ್ರ ಯತಿ ಚಕ್ರವರ್ತಿ ankita jagannatha vittala varadendra teertha stutih

ಜಗನ್ನಾಥದಾಸರು
ವರದೇಂದ್ರ ಯತಿ ಚಕ್ರವರ್ತಿ ನಿರಂತರ
ವರಣಿಸುವೆ ನಿಮ್ಮ ಕೀರ್ತಿ
ಪರಮ ಕರುಣಿ ನಿಮ್ಮ ಚರಣಕಮಲಯುಗ
ಕ್ಕೆರಗಿ ಬೇಡುವೆ ವರವಾ ಎಮ್ಮನು ಪೊರೆವಾ ಪ

ನತಜನಬಂಧು ನೀನೆಂದೂ | ತಿಳಿದು
ನತಿಸಿದೆ ಗುಣಗಣಸಿಂಧು
ಪ್ರತಿಗಾಣೆ ನಿಮಗೆ ಸುವ್ರತಿ ವರ ಪ್ರಣತ ಕಾ
ಮಿತ ಕಲ್ಪತರುವೆ ನಿರ್ಜಿತಮಾರಮಾರ್ಗಣ
ಕ್ಷಿತಿಪರಿಗೆ ಪ್ರತಿದಿನದಿ ಪರಮಾದ್ಭುತವೆನಿಸುವುದು ನಿಮ್ಮದಾನ
ಪ್ರತತಿ ಸಾಂಪ್ರತ ಮಧುರವಚನಾ ಶಾಸ್ತ್ರ ಪ್ರವಚನಾ1

ಮರುತ ಮತಾಂಬುಧಿ ಚಂದ್ರಾ | ಚಾಮಿ
ಕರವರ್ಣಸರಸ ರವೀಂದ್ರ
ಪರವಾದಿತಿಮಿರ ಭಾಸ್ಕರ ವಸುಧೀಂದ್ರ ಸ
ದ್ಗುರು ಕರಸಂಜಾತ ನಿರುಪಮ ನಿರ್ಭೀತಾ
ಖರಮಥನ ಪದಕೋನದ ಮಧುಕರ ಕೃಪಾಕರ
ಕರವ ಪಿಡಿದುದ್ಧರಿಸುವುದು ಭೂ
ಸುರ ಕುಲೋತ್ತಂಸಾ ನಮೋ ಪರಮಹಂಸಾ 2

ಕಲಿತ ಸುಂದರ ಮಂದಹಾಸಾ ಹೇ ನಿ
ಷ್ಕಲುಷ ಸುತತ್ವ ವಿಲಾಸಾ
ಗಳಿತಾ ಘಸಂಘನಿಶ್ಚಲ ಜಗನ್ನಾಥ ವಿ
ಠಲನೊಲಿಮೆಯ ಪಡೆದಿಳಿಯೊಳು ಚರಿಸುವ
ಭಳಿರೆ ಪ್ರತಿಯೋಗಿಗಳೆನಿಪ ಕಂ
ಕಲಭಕೇಸರಿ ನಿಮ್ಮ ದಾಸರೊಳೊಲಿದು
ಪಾಲಿಪುದನವರತ ಎನ್ನ ನಂಬಿದೆನೋ ನಿನ್ನ 3
*********