Showing posts with label ವೇದವೇದ್ಯರ ವಂದಿಸುವೆನು others vedavedya teertha stutih. Show all posts
Showing posts with label ವೇದವೇದ್ಯರ ವಂದಿಸುವೆನು others vedavedya teertha stutih. Show all posts

Friday, 27 December 2019

ವೇದವೇದ್ಯರ ವಂದಿಸುವೆನು others vedavedya teertha stutih

ವೇದವೇದ್ಯರ ವಂದಿಸುವೆನು
ವಾದಿರಾಜರ ಪ್ರಿಯ ಶಿಷ್ಯರ
ವೇದವೇದ್ಯರ ವಂದಿಸುವೆನು.... ಪ

ವಾದಿರಾಜರ ಪಾಶ್ರ್ವದಲ್ಲಿಹ
ವಾದಿಗಳ ದುರ್ವಾದ ಕೆಡಿಸಿದ
ಮಧ್ವಶಾಸ್ತ್ರವನುದ್ಧರಿಸಿದ
ವೇದನಿಧಿಗಳ ತಾತರಾಗಿಹ...... 1

ರೂಪ್ಯಪೀಠದಿ ಕೃಷ್ಣಮಂದಿರ
ರೂಪಳಿದುದನುದ್ಧಾರ ಮಾಡಿದ
ಪಾಪರಹಿತರ ಕೋಪಶೂನ್ಯ ಸೋ-
ದಾಪುರದೊಳಗೆ ಇರ್ಪ ಯತಿಗಳ..... 2

ಯಾದವೇಶ ರಾಜೇಶ ಹಯಮುಖ
ಪಾದಕಮಲವ ಬಿಡದೆ ಸ್ಮರಿಸುವ
ಸಾಧುಜನರಿಗಾಧಾರರಾಗಿಹ
ವಾದಿರಾಜರ ಪದದೊಳಿರ್ಪರ.....3
*******