Showing posts with label ಪುರಂದರ ಗುರುವೆ ಕಡು ಜ್ಞಾನ ಭಕ್ತಿ ವೈರಾಗ್ಯದ ನಿಧಿಯೆ vijaya vittala purandara dasa stutih. Show all posts
Showing posts with label ಪುರಂದರ ಗುರುವೆ ಕಡು ಜ್ಞಾನ ಭಕ್ತಿ ವೈರಾಗ್ಯದ ನಿಧಿಯೆ vijaya vittala purandara dasa stutih. Show all posts

Wednesday, 16 October 2019

ಪುರಂದರ ಗುರುವೆ ಕಡು ಜ್ಞಾನ ಭಕ್ತಿ ವೈರಾಗ್ಯದ ನಿಧಿಯೆ ankita vijaya vittala purandara dasa stutih

ಪುರಂದರ ಗುರುವೆ ಪ

ಕಡು ಜ್ಞಾನ-ಭಕ್ತಿ-ವೈರಾಗ್ಯದ ನಿಧಿಯೆ ಅ.ಪ

ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ |
ಗುರು ವ್ಯಾಸರಾಯರಿಂದುಪದೇಶಗೊಂಡೆ ||
ಎರಡೆರಡು ಲಕ್ಷದಿಪ್ಪತೈದು ಸಾವಿರ |
ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ 1
ಗಂಗಾದಿ ಸಕಲ ತೀರ್ಥಂಗಳ ಚರಿಸಿತು |
ರಂಗವದನ ವೇದವಾಸ್ಯನ ||
ಹಿಂಗದೆ ಮನದಲ್ಲಿ ನೆನೆದು ನೆನೆದು ಮರೆವ |
ಮಂಗಳ ಮಹಿಮೆಯ ನುತಿಸಿ ನುತಿಸಿ ನಾ 2
ನಿನ್ನತಿಶಯಗುಣ ವರ್ಣಿಸಲಳವಲ್ಲ |
ನಿನ್ನ ಸೇವಕನ ಸೇವಕನೆಂತೆಂದು ||
ಪನ್ನಗಶಯನ ಮುಕುಂದ ಕರುಣ ಪ್ರ |
ಸನ್ನ ವಿಜಯವಿಠ್ಠಲ ಸಂಪನ್ನ 3
********