Showing posts with label ವಾಸುಕಿಶಯನನೆ ವೆಂಕಟಗಿರಿ pranesha vittala. Show all posts
Showing posts with label ವಾಸುಕಿಶಯನನೆ ವೆಂಕಟಗಿರಿ pranesha vittala. Show all posts

Saturday, 16 November 2019

ವಾಸುಕಿಶಯನನೆ ವೆಂಕಟಗಿರಿ ankita pranesha vittala

by ಪ್ರಾಣೇಶದಾಸರು
ವಾಸುಕಿಶಯನನೆ ವೆಂಕಟಗಿರಿ |ವಾಸನೆಯಜ್ಞಾದ್ಯವತಾರನೆ |ಮೇಶಾ ನರಸಿಂಹಾ ಹಸಿಗೇಳೂ ಪ

ಬೊಮ್ಮಾ ಶಂಕರ ಮುಖ ವಂದಿತ |ಸಮ್ಮೀರವಾಹನಗರುಡಧ್ವಜ |ಅಮ್ಮರೇಶಾನುಜ ಶ್ರೀ ಉಪೇಂದ್ರಾ || ಉಪೇಂದ್ರದಾಮೋದರಹರಿ| ತಮ್ಮನಾ ತಮ್ಮ ಹಸಿಗೇಳೂ 1

ವಾಮನ ನಾರಾಯಣಅಚ್ಯುತ|ತಾಮಸಗುಣಜನ ಸಂಹಾರಕ |ಶ್ಯಾಮಾಂಗ ಕೋಟಿ ರವಿತೇಜಾ ||ರವಿತೇಜಾ ತ್ರೈಲೋಕದಗುರುಹೇಮಾಂಗದ ವರದಾ ಹಸಿಗೇಳೂ 2

ಜಲಜಾಕ್ಷನೆಕೌಸ್ತುಭಶೋಭಿತ |ಜಲನಿಧಿ ಶಯನನೆ ನರಕಾಂತಕಾ |ಬಲಿಬಂಧಿಸೀದನೆ ಪರತತ್ವಾ ||ಪರತತ್ವರವಿದರ ಗದಧರಫಲುಗುಣನಾ ಸಖನೇ ಹಸಿಗೇಳೂ 3

ಕನಕಾಂಬರ ಕಶ್ಯಪರಿಪುಹರಿ|ಧನಪತಿ ಮಿತ್ರನ ಭಯ ಬಿಡಿಸಿದ |ಇನಪುತ್ರಗೊಲಿದಾ ರಘುಪತೀ ||ರಘುಪತಿ ಭಕ್ತಸುರತರುಮನಸಿಜಾ ಪಿತನೆ ಹಸಿಗೇಳೂ 4

ಶತಯಾಗನ ಗರ್ವ ವಿಭಂಜನ |ಕ್ಷಿತಿವಂದಡಿ ಮಾಡಿದವನೇ |ಸುತನಲ್ಲಿ ಪಾಲು ಕುಡಿದಾನೆ ||ಕುಡಿದಾನೆ ರುಗ್ಮಿಣಿವಲ್ಲಭಪತಿತಾ ಪಾವನ್ನಾ ಹಸಿಗೇಳೂ5

ಝಗ ಝಗಿಸುವ ಪೀತಾಂಬರದುಡಿ |ಗಿಗಳಿಂದಲಿ ಹೊನ್ನುಡದಾರದಿ |ಮಿಗಿಲಾದ ವೈಜಯಂತೀ ವನಮಾಲೀ ||ವನಮಾಲಿ ಕೊರಳೊಳಗೊಪ್ಪುವಜಗದೀಶ ಕೃಷ್ಣಾ ಹಸಿಗೇಳೂ 6

ಗಂಗೆಯ ಚರಣದಿ ಪಡದಿಹ ಬಹು |ಮಂಗಳ ಮೂರುತಿ ಶ್ರೀ ವಾಮನಾ |ಜಂಗುಳಿ ಹೆಣ್ಣುಗಳಾ ಒಲಿಸೂತಾ ||ಒಲಿಸುತಾ ಚಿಂತಿಗಳೆಲ್ಲನುಹಿಂಗಿಸುವಾ ದೇವಾ ಹಸಿಗೇಳೂ 7

ಧ್ರುವ ದ್ರೌಪದಿಯ ಸುರಜ ಪೋಷಕ |ಅವಿವೇಕ ದಶಮುಖ ವಿನಾಶಕಾ |ಲವಣಾಸುರ ಕಂಸಾ ಮುರಾ ಧ್ವಂಸೀ ||ಮುರಧ್ವಂಸೀ ಐದೊಂದಬಲೆರಾಧವವಾಸುದೇವಾ ಹಸಿಗೇಳೂ 8

ಕೇಶವ ಸತ್ರಾಯಣ ಸುತ ಪ್ರಾ- |ಣೇಶ ವಿಠ್ಠಲ ದಕ್ಷಿಣವಲ್ಲಭ|ದೋಷ ರಹಿತನೆ ಅನಿರುದ್ಧಾ ||ಅನಿರುದ್ಧಾ ಭಾಗವತರಘನಾಶಾ ಪರಮಾತ್ಮಾ ಹಸಿಗೇಳೂ 9
********