Showing posts with label ಏನಿದು ರೂಪ ಶ್ರೀ ನರಹರೆ narahari P. Show all posts
Showing posts with label ಏನಿದು ರೂಪ ಶ್ರೀ ನರಹರೆ narahari P. Show all posts

Thursday, 5 August 2021

ಏನಿದು ರೂಪ ಶ್ರೀ ನರಹರೆ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ಏನಿದು ರೂಪ ಶ್ರೀ ನರಹರೆ ಪ

ಏನಿದು ರೂಪವೋ ಮನಸಿಜನಯ್ಯನೇ
ನೆನಿಸಿದವರ ಹೃದ್ವನಜದೊಳ್ ಮೆರೆವುದೂ ಅ.ಪ

ಮಾರನ ಪಿತನೆಂದು ಕರೆಸಿ ಕೊಂಬುವನಿಗೆ
ಮೋರೆಯೊಳ್ ಮೂರು ಕಣ್ಣುಗಳ ಧರಿಸಿರುವುದು 1

ಪರಮ ಶಾಂತನೆಂದು ಮೆರೆಯುವೀ ಶ್ರುತಿಯೊಳು
ಕ್ರೂರ ರೂಪದಿಂದ ನರರಿಗೆ ತೋರ್ಪುದು 2

ವರ ವೈಜಯಂತಿಯ ಕೊರಳೊಳ್ ಧರಿಸುವಗೆ
ಕರುಳ ಹಾರವ ಧರಿಸಿ ವರ ಶಬ್ದ ಮಾಳ್ವೊದು 3
ನಾನೇ ದೇವರು ಮತ್ತು ಅನ್ಯರಿಲ್ಲೆಂಬುವ
ಕನಕ ಕಶ್ಯಪ ಮುಖ್ಯ ದನುಜರ ಸೀಳ್ವುದು 4

ತರಳ ಕರದಾಕ್ಷಣದಿ ವರ ವೈಕುಂಠವ ಬಿಟ್ಟು
ನರಹರಿ ಎನಿಸಿ ನೀ ಭರದಿ ಬಂದಿರುವುದು 5
***