ಬಾರಯ್ಯ ಶ್ರೀನಿವಾಸ
ದರುಶನ ನೀಡಯ್ಯಾ ಶ್ರೀನಿವಾಸಾ
ಶ್ರೀಲೋಲ ಶ್ರೀನಿವಾಸ
ಶ್ರೀಪತಿ ಶೇಷಾಶಾಯಿ ಶ್ರೀನಿವಾಸ ||ಬಾರಯ್ಯ||
ಬ್ರಹ್ಮವಂದೇ ಶ್ರೀನಿವಾಸ
ಪರಬ್ರಹ್ಮ ನೀನೇ ಶ್ರೀನಿವಾಸ ||ಬ್ರಹ್ಮ||
ಪಾವನಾಂಗ ಶ್ರೀನಿವಾಸ ನೀ
ಪಾಪಹರಣ ಶ್ರೀನಿವಾಸ ||ಪಾವನಾಂಗ||
||ಬಾರಯ್ಯ ||
ಗರುಡಗಮನ ಶ್ರೀನಿವಾಸ
ನೀ ಗಂಗಾಜನಕ ಶ್ರೀನಿವಾಸ ||ಗರುಡ||
ಘನ್ನ ಮಹಿಮಾ ಶ್ರೀನಿವಾಸ
ಎನ್ನ ಗರ್ವ ಬಿಡಿಸೋ ಶ್ರೀನಿವಾಸ ||ಘನ್ನ||
ದೋಷ ಹಾರಿ ಶ್ರೀನಿವಾಸ
ದಶಾವತಾರಿ ಶ್ರೀನಿವಾಸ ||ದೋಷ||
ಈಶ ನೀನೆ ಶ್ರೀನಿವಾಸ
ಎನ್ನ ಕ್ಲೇಶ ಹರಿಸು ಶ್ರೀನಿವಾಸ ||ಈಶ||
||ಬಾರಯ್ಯ ||
ವಜ್ರ ಮುಕುಟ ಶ್ರೀನಿವಾಸ
ನೀ ವರಗಿರಿ ಶ್ರೀನಿವಾಸ ||ವಜ್ರ||
ದಾಸನಾಗು ಶ್ರೀನಿವಾಸ
ಎನಲ್ಲಿ ವಾಸಮಾಡು ಶ್ರೀನಿವಾಸ
||ದಾಸನಾಗು||
ಏಳು ಗಿರಿಯ ಶ್ರೀನಿವಾಸ
ನಿನ್ನಾಳು ನಾನು ಶ್ರೀನಿವಾಸ ||ಏಳು||
ಗೋಳು ಬಿಡಿಸು ಶ್ರೀನಿವಾಸ
ಎನ್ನ ಬಾಳು ಉಳಿಸಿ ಶ್ರೀನಿವಾಸ ||ಗೋಳು||
||ಬಾರಯ್ಯ||
ಮಾರಾಜನಕ ಶ್ರೀನಿವಾಸ
ಮನಶುದ್ಧಿ ಸುದ್ದಿ ಮಾಡೋ ಶ್ರೀನಿವಾಸ
||ಮಾರಜನಕ||
ಮನ್ನಿಸಯ್ಯ ಶ್ರೀನಿವಾಸ
ಮನ ನಿಲ್ಲಿಸಯ್ಯ ಶ್ರೀನಿವಾಸ
||ಮನ್ನಿಸಯ್ಯ||
ಜಲಜನಾಭ ಶ್ರೀನಿವಾಸ ನೀ
ಜಗದ ಮೂಲ ಶ್ರೀನಿವಾಸ ||ಜಲಜ||
ಜಯ ಜಯ ಶ್ರೀನಿವಾಸ
ಜಯರಾಮ ವಿಠ್ಠಲಯ್ಯ ಶ್ರೀನಿವಾಸ
||ಜಯ ||
||ಬಾರಯ್ಯ||
****