Showing posts with label ಲಾಲಿ ಆಡಿದ ರಂಗ ಲಾಲಿ ಆಡಿದ ಬಾಲೆ ರುಕ್ಮಿಣಿ hayavadana LAALI AADIDA RANGA LAALI AADIDA BAALE RUKMINI. Show all posts
Showing posts with label ಲಾಲಿ ಆಡಿದ ರಂಗ ಲಾಲಿ ಆಡಿದ ಬಾಲೆ ರುಕ್ಮಿಣಿ hayavadana LAALI AADIDA RANGA LAALI AADIDA BAALE RUKMINI. Show all posts

Saturday, 11 December 2021

ಲಾಲಿ ಆಡಿದ ರಂಗ ಲಾಲಿ ಆಡಿದ ಬಾಲೆ ರುಕ್ಮಿಣಿ ankita hayavadana LAALI AADIDA RANGA LAALI AADIDA BAALE RUKMINI



ಲಾಲಿ ಆಡಿದ ರಂಗ ಲಾಲಿ ಆಡಿದ || ಪ. ||

ಬಾಲೆ ರುಕ್ಮಿಣಿ ದೇವೇರೊಡನೆ 
ಮೂರು ಲೋಕನಾಳ್ವ ದೊರೆಯು || ಅ. ಪ. ||

ಸಾಧು ಮಚ್ಚಕಚ್ಚಪ ರೂಪನಾಗಿ ಭೇದಿಸಿ ತಮನ 
ಕೊಂದುವೇದವನ್ನು ಮಗನಿಗಿತ್ತು ಭೂದೇವಿಯರೊಡನೆ ಕೃಷ್ಣ || 1 ||

ಬೆಟ್ಟವನ್ನು ಬೆನ್ನಲಿಟ್ಟು ಮಿತ್ರೆ ಮೋಹಿನಿ ರೂಪತಾಳಿ 
ಭಕ್ತರಿಗೆ ಅಮೃತ ಬಡಿಸಿ ಸತ್ಯಭಾಮೆಯರೊಡನೆ ಕೃಷ್ಣ || ೨ ||

ಕ್ರೋಡ ವರಾಹ ರೂಪನಾಗಿ ಆದಿ ಹಿರಣ್ಯಕನ ಕೊಂದು 
ಮೇದಿನಿಯ ಮೇಲಕೆ ತಂದು ರಾಧೆಯೊಡನೆ ನಗುತ ಕೃಷ್ಣ || ೩ ||

ಪುಟ್ಟ ಬಾಲನ ನುಡಿಯ ಕೇಳಿ ಕೆಟ್ಟ ಕಶ್ಯಪನುದರ ಸೀಳಿ 
ಅಷ್ಟ ಮಂಗಳ ವಾದ್ಯವಾಗಲು ಅಷ್ಟ ಸ್ತ್ರೀಯರೊಡನೆ ಕೃಷ್ಣ || ೪ ||

ಯುಕುತಿಯಿಂದ ಭೂಮಿ ಅಳೆದು ಭಕುತ ಬಲಿಯ ತಲೆಯ ತುಳಿದು 
ಶಕುತನೆಂದು ಪೊಗಳೆ ಸುರರು ಲಕುಮಿಯೊಡನೆ ನಗುತ ಕೃಷ್ಣ || ೫ ||

ಯುದ್ಧದಲಿ ಕೊಡಲಿ ಪಿಡಿದು ಗುದ್ದಿ ಕ್ಷತ್ರೇರ ಶಿರವ 
ತರಿದುಗೆದ್ದ ಸಿಂಹನೆನಿಸಿಕೊಂಡು ಪದ್ಮಾವತಿಯ ಕೂಡೆ ಕೃಷ್ಣ || ೬ ||

ಸೇತು ಬಂಧನವನ್ನೆ ಮಾಡಿ ಧೂರ್ತ ರಾವಣನ್ನ ಕೊಂದು 
ಖ್ಯಾತಿ ಪಡೆದು ಪುರಕೆ ಬಂದು ಸೀತೆಯೊಡನೆ ರಾಮಚಂದ್ರ || ೭ ||

ಒಂದು ಏಳು ಎಂಟು ಸಾವಿರ ಇಂದುಮುಖಿಯರನ್ನು ಕೂಡಿ 
ಮಂದ ಮಾರುತ ಚಂದ್ರ ಬರಲು ನಂದ ಗೋಕುಲದ ದೊರೆಯ ||  ೮ ||

ಅಂಬರವ ತೊರೆದು ದಿಗಂಬರ ವೇಷವನ್ನೆ ಧರಿಸಿ ಮಂಗಳಾಂಗ 
ಮಾರ ಜನಕ ರಂಗನಾಯಕಿಯೊಡನೆ ಕೃಷ್|| ೯ ||

ಅಚ್ಚಮುತ್ತಿನಾಭರಣವಿಟ್ಟು ಲಕ್ಷವಿಲ್ಲದೆ ಹಯವನೇರಿ 
ಭಕುತರಿಗೆ ಅಭಯ ಕೊಡುತ ಭಕ್ತ ವತ್ಸಲ ಹಯವದನ || ೧೦ ||
***********

ಲಾಲಿ ಆಡಿದ ರಂಗ ಲಾಲಿ ಆಡಿದ ||ಪ||
ಬಾಲೆ ರುಕ್ಮಿಣಿ ದೇವೇರೊಡನೆ |
ಮೂರು ಲೋಕನಾಳ್ವ ದೊರೆಯು ||ಅ.ಪ||
ಸಾಧು ಮಚ್ಚಕಚ್ಚಪರೂಪನಾಗಿ |
ಭೇದಿಸಿ ತಮನ ಕೊಂದು ||
ವೇದವನ್ನು ಮಗನಿಗಿತ್ತು |
ಭೂದೇವಿಯರೊಡನೆ ಕೃಷ್ಣ ||೧||
ಬೆಟ್ಟವನ್ನು ಬೆನ್ನಲಿಟ್ಟು |
ಮಿತ್ರೆಮೋಹಿನಿ ರೂಪತಾಳಿ ||
ಭಕ್ತರಿಗೆ ಅಮೃತ ಬಡಿಸಿ |
ಸತ್ಯಭಾಮೆಯರೊಡನೆ ಕೃಷ್ಣ ||೨||
ಕ್ರೋಢ ವರಾಹ ರೂಪನಾಗಿ |
ಆದಿ ಹಿರಣ್ಯಕನ ಕೊಂದು ||
ಮೇದಿನಿಯ ಮೇಲಕೆ ತಂದು |
ರಾಧೆಯೊಡನೆ ನಗುತ ಕೃಷ್ಣ ||೩||
ಪುಟ್ಟಬಾಲನ ನುಡಿಯ ಕೇಳಿ |
ಕೆಟ್ಟ ಕಶ್ಯಪನುದರ ಸೀಳಿ ||
ಅಷ್ಟಮಂಗಳವಾದ್ಯವಾಗಲು |
ಅಷ್ಟ ಸ್ತ್ರೀಯರೊಡನೆ ಕೃಷ್ಣ ||೪||
ಯುಕುತಿಯಿಂದ ಭೂಮಿ ಅಳೆದು |
ಭಕುತ ಬಲಿಯ ತಲೆಯ ತುಳಿದು ||
ಶಕುತನೆಂದು ಪೊಗಳೆ ಸುರರು |
ಲಕುಮಿಯೊಡನೆ ನಗುತ ಕೃಷ್ಣ ||೫||
ಯುದ್ಧದಲಿ ಕೊಡಲಿ ಪಿಡಿದು |
ಗುದ್ದಿ ಕ್ಷತ್ರೇರ ಶಿರವ ತರಿದು ||
ಗೆದ್ದ ಸಿಂಹನೆನಿಸಿಕೊಂಡು |
ಪದ್ಮಾವತಿಯ ಕೂಡೆ ಕೃಷ್ಣ ||೬||
ಸೇತುಬಂಧನವನ್ನೆ ಮಾಡಿ |
ಧೂರ್ತರಾವಣನ್ನ ಕೊಂದು ||
ಖ್ಯಾತಿಪಡೆದು ಪುರಕೆ ಬಂದು |
ಸೀತೆಯೊಡನೆ ರಾಮಚಂದ್ರ ||೭||
ಒಂದು ಏಳು ಎಂಟುಸಾವಿರ |
ಇಂದುಮುಖಿಯರನ್ನು ಕೂಡಿ ||
ಮಂದಮಾರುತ ಚಂದ್ರ ಬರಲು |
ನಂದಗೋಕುಲದ ದೊರೆಯು ||೮||
ಅಂಬರವ ತೊರೆದು ದಿ|
ಗಂಬರ ವೇಷವನ್ನೆ ಧರಿಸಿ ||
ಮಂಗಳಾಂಗ ಮಾರಜನಕ |
ರಂಗನಾಯಕಿಯೊಡನೆ ಕೃಷ್ಣ ||೯||
ಅಚ್ಚಮುತ್ತಿನಾಭರಣವಿಟ್ಟು |
ಲಕ್ಷವಿಲ್ಲದೆ ಹಯವನೇರಿ ||
ಭಕುತರಿಗೆ ಅಭಯಕೊಡುತ |
ಭಕ್ತವತ್ಸಲ ಹಯವದನ ||೧೦||
ಕೃತಿಕಾರರು
ಶ್ರೀ ವಾದಿರಾಜರು
******