Showing posts with label ಅಲ್ಪಮನುಜರಿಗಾಲ್ಪರಿಸಬ್ಯಾಡೊ ಹರಿಯೆ gurujagannatha vittala. Show all posts
Showing posts with label ಅಲ್ಪಮನುಜರಿಗಾಲ್ಪರಿಸಬ್ಯಾಡೊ ಹರಿಯೆ gurujagannatha vittala. Show all posts

Friday, 27 December 2019

ಅಲ್ಪಮನುಜರಿಗಾಲ್ಪರಿಸಬ್ಯಾಡೊ ಹರಿಯೆ ankita gurujagannatha vittala

by ಗುರುಜಗನ್ನಾಥದಾಸರು
ಅಲ್ಪಮನುಜರಿಗಾಲ್ಪರಿಸಬ್ಯಾಡೊ ಹರಿಯೆ ಪ

ಕಲ್ಪತರುಸಮ ನೀನಲ್ಪಜನತತಿಗೆ ಅ.ಪ

ಕಲ್ಪತರು ನೀನೆಂದು ಸಂತಸದಿಅನುದಿನಸ್ವಲ್ಪವಾದರು ಮನದೊಳಗೆ ವಿಕಲ್ಪಮಾಡದವನಾ 1

ಅನ್ಯದೇವರನಾಮ ಮನ್ನದೊಳು ನೆನೆಯದೆನಿನ್ನ ಚರಣವನು ನೆರೆನಂಬಿದವನಾ 2

ಅನ್ಯರನು ಯಾಚಿಸದಿಪ್ಪ ನರನಾ 3

ಮಧ್ವದ್ವೇಷಿಗಳೊಡನೆಬದ್ಧದ್ವೇಷವಮಾಡಿಮಧ್ವರಾಯರಪಾದ ಪೊಂದಿ ಇರುತಿಹನಾ 4

ನಾಥ ನಿನ್ನದುಪಾದಪಾಥೋಜಯುಗವನುವ್ಯೂಥದೊಳಗೆ ಇಟ್ಟುಪೊರೆನೀ ದಾತಗುರುಜಗನ್ನಾಥವಿಠಲರಾಯ ಸತತಾ 5
*******