Showing posts with label ಸುಗ್ಗಿ ಸುಕಾಲಾಯಿತು ಜಗದೊಳಗೆ ಅಗ್ಗಳತ್ಯಾಯಿತು ಗುರುದಯಲೆನಗೆ mahipati. Show all posts
Showing posts with label ಸುಗ್ಗಿ ಸುಕಾಲಾಯಿತು ಜಗದೊಳಗೆ ಅಗ್ಗಳತ್ಯಾಯಿತು ಗುರುದಯಲೆನಗೆ mahipati. Show all posts

Wednesday, 1 September 2021

ಸುಗ್ಗಿ ಸುಕಾಲಾಯಿತು ಜಗದೊಳಗೆ ಅಗ್ಗಳತ್ಯಾಯಿತು ಗುರುದಯಲೆನಗೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸುಗ್ಗಿ ಸುಕಾಲಾಯಿತು ಜಗದೊಳಗೆ ಅಗ್ಗಳತ್ಯಾಯಿತು ಗುರುದಯಲೆನಗೆ ಪ  


ಭಕ್ತಿ ಭೂಮಿಯು ಕೈಗೊಟ್ಟಿತು ಪೂರ್ಣ ತತ್ವೋಪದೇಶ ತಿಳಿಯಿತು ನಿಧಾನ ಭಕ್ತರಿಗಿದರಿಡುವದು ಅನುದಿನ ಮುಕ್ತಿಯ ಫಲ ಮುನಿಜನರಾಭಣ 1 

ಮಳೆಗರಿಯಿತು ಮಹಾಗುರುದಯ ಕರುಣ ಬೆಳೆಬೆಳೆಯಿತು ಮಹಾ ಸುಙÁ್ಞನದ ಸ್ಫುರಣ ತಿಳಿಯಿತು ಬರವಿದು ಭವಬಂಧನ ಕಳೆಯಿತು ಕಾಂಕ್ಷೆ ಹುಟ್ಟುವ ಹೊಂದುಣ2 

ಮನೋಹರವಾಯಿತು ಗುರುಕೃಪೆಯಿಂದ ಜನವನದೊಳು ಕಾಣಿಸಿದ ಗೋವಿಂದ ಅನುಭವ ಸುಖವಿದು ಬ್ರಹ್ಮಾನಂದ ಘನಸುಖಪಡೆದ ಮಹಿಪತಿ ಇದರಿಂದ 3

***