ಮುಕ್ತೀಶ ದೀನಬಂಧು ಕೃಷ್ಣ
ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ
ಸತ್ಯವತಿ ಸುತÀನೆ ಕಾಯೋ ಕೃಷ್ಣ
ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ |
ಆನಂದದಲಿ ನಿಲಿಸೊ ಕೃಷ್ಣ ||
ದೀನಜನ ಮಂದಾರ ನೀನೆಂದು ನಂಬಿದೆನೊ |
ಸಾನುರಾಗದಲಿ ಕಾಯೋ ಕೃಷ್ಣ ||1||
ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ |
ಭ್ರಷ್ಟನಾಗಿ ಪೋದೆನೋ ಕೃಷ್ಣ ||
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ |
ಇಷ್ಟಗಳ ಎನಗೆ ಕೊಡಿಸೋ ಕೃಷ್ಣ ||2||
ಅಜಜನಕ ಗಜವರದ ಭುಜಗಶಯನನೆ ನಿನ್ನ |
ಭಜಿಪ ಭಾಗ್ಯವನೆ ಕೊಡಿಸೊ ಕೃಷ್ಣ ||
ನಿಜವಾಗಿ ನಿನ್ಹೊರುತು ಸಲಹುವರ ನಾ ಕಾಣೆ |ವಿಜಯವಿಠ್ಠಲರೇಯ ಕೃಷ್ಣ ||3||
**********