RSS song .
ಆಹ ಎಂಥ ಪುಣ್ಯ ಈ ಜನುಮ
ಓಹೋ ದಿವ್ಯಧಾರಿಣಿಯ ಮಹಿಮ
ಇಲ್ಲಿ ವೈಭೋಗ ವೈಭವ ನರ್ತನ
ಎನ್ನ ತಾಯಿ ಭಾರತಿಗೆ ನಮನ ||ಪ||
ನಿನ್ನ ಒಡಲಿನಲಿ ಮಮತೆ ಮಡಿಲಿನಲಿ
ಕಡಲ ಬಿತ್ತರದ ಹಿರಿಮೆಗಳು
ಭವ್ಯ ಮನಸುಗಳ ರಮ್ಯ ದಿನಿಸುಗಳ
ಉನ್ನತ ಸಾಧನೆ ಗರಿಮೆಗಳು ||೧||
ಸಮರ ರಂಗದಲಿ ನೇಣುಗಂಬದಲಿ
ನೆತ್ತರಿತ್ತ ಬಲಿ ನೆನಪುಗಳು
ಯೋಗ ತ್ಯಾಗಗಳ ಕರ್ಮಕಮ್ಮಟದಿ
ನುಗ್ಗಿ ಮುಗುಳ್ನಗುವ ಹೊಳಪುಗಳು ||೨||
ತತ್ವ ದರ್ಶನದ ಅನುಭವಾನುಭಾನ
ಋಷಿ ಕಲ್ಪನೆಯ ಗುರುತುಗಳು
ಬಾಂದಳದ ಭೂಮಿಯ ರಹಸ್ಯ ವಿಸ್ಮಯ
ಶೋಧಿಸಿ ಜ್ಞಾನದ ಮರುತಗಳು ||೩||
ಸೇವೆಯ ಸ್ಪರ್ಶ ಪರಿಶ್ರಮದ ಹರ್ಷ
ನಾಳೆಯ ನಿರ್ಮಿತ ಸ್ಪೂರ್ತಿಗಳು
ಸಾಮರಸ್ಯದ ಸಮಾನ ನೆಲೆಗೆ
ನಾವು ದಿವ್ಯತೆಯ ಮೂರ್ತಿಗಳು ||೪||
***
aaha eMtha puNya I januma
OhO divyadhAriNiya mahima
illi vaibhOga vaiBava nartana
enna tAyi BAratige namana ||pa||
ninna oDalinali mamate maDilinali
kaDala bittarada hirimegaLu
bhavya manasugaLa ramya dinisugaLa
unnata sAdhane garimegaLu ||1||
samara raMgadali nENugaMbadali
nettaritta bali nenapugaLu
yOga tyAgagaLa karmakammaTadi
nuggi muguLnaguva hoLapugaLu ||2||
tatva darSanada anuBavaanuBAna
RuShi kalpaneya gurutugaLu
bAMdaLada BUmiya rahasya vismaya
SOdhisi j~jAnada marutagaLu ||3||
sEveya sparSa pariSramada harSha
nALeya nirmita spUrtigaLu
sAmarasyada samAna nelege
nAvu divyateya mUrtigaLu ||4||
***