time 0.39
ಜಾಲಿಯ ಮರವಂತೆ ಧರೆಯೊಳು ದುರ್ಜನರು
ಜಾಲಿಯ ಮರವಂತೆ ||ಪ||
ಜಾಲಿಯ ಮರವಂತೆ ||ಪ||
ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ ||ಅ.ಪ||
ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣೂ ಇಲ್ಲ
ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ ||
ಊರ ಹಂದಿಗೆ ಷಡ್ರಸಾನ್ನವನಿಕ್ಕಲು
ನಾರುವ ದುರ್ಗಂಧ ಬಿಡುವುದುಂಟೆ
ಘೋರ ಪಾಪಿಗೆ ತತ್ವಜ್ಞಾನ ಹೇಳಿದರೆ
ಕ್ರೂರಕರ್ಮವ ಬಿಟ್ಟು ಸುಜನನಾಗುವನೆ ||
ತನ್ನಿಂದ ಉಪಕಾರ ತಟುಕಾದರೂ ಇಲ್ಲ
ಬಿನ್ನಣ ಮಾತಿಗೆ ಕೊನೆಯಿಲ್ಲವು
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರವಿಠಲ |
****
ರಾಗ ಮೋಹನ ಅಟತಾಳ (raga, taala may differ in audio)
Jaliya maradante dhareyolu durjanaru||pa||
Mulagra pariyante mullu kudippante||a.pa||
Bililalli balali bandavarige neralilla
Hasidu bandavarige hannu illa
Kusuma vasaneyilla kudalu sthalavilla
Rasadalli svadavu vishadante irutiha||1||
Ura handige shadrasannavanikkalu
Naruva durgandha bidaballude
Gorapapige tatvaj~janava pelalu
Krura karmava bittu sujananaguvane||2||
Tanninda upakara totakadaru illa
Binnanada matige koneyilla
Annakke serida kunni manavarante
Innivara karyavu purandaravithala||3||
***
pallavi
jAliya maravante dhareyoLu durjanaru jAliya maravante
anupallavi
mUlAgra pariyanta muLLu kUDippantha
caraNam 1
bisilali baLali bandavarige neraLilla hasidu bandavarige haNNu illa
kusuma vAsaneyilla kUDalu sthaLavilla rasadalli svAdavu viSadante irutiha
caraNam 2
Urahandige SaDrasAnnavanikkalu nAruva durgandha biDuvuduNTe
ghOra pApige tatva jnAna hElidare krUra karmava biTTu sujananAguvane
caraNam 3
tanninda upakAra taTukAdaru illa pinnANa mAtike koneyillavu
annakke sErida kunni mAnavarante innivara kAryavu purandara viTTala
***
ಜಾಲಿಯ ಪರಿಯಂತೆ ಮುಳ್ಳು ಕೂಡಿಪ್ಪಂತೆ||a.pa||
ಬಿಲಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ||1||
ಊರ ಹಂದಿಗೆ ಷಡ್ರಸಾನ್ನವನಿಕ್ಕಲು
ನಾರುವ ದುರ್ಗಂಧ ಬಿಡಬಲ್ಲುದೆ
ಘೋರಪಾಪಿಗೆ ತತ್ವಜ್ಞಾನವ ಪೇಳಲು
ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ||2||
ತನ್ನಿಂದ ಉಪಕಾರ ತೊಟಕಾದರು ಇಲ್ಲ
ಬಿನ್ನಾಣದ ಮಾತಿಗೆ ಕೊನೆಯಿಲ್ಲ
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರವಿಠಲ||3||
***
ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲಹಸಿದು ಬಂದವರಿಗೆ ಹಣ್ಣಿಲ್ಲವೊಕುಸುಮವಾಸನೆಯಿಲ್ಲ ಕುಳ್ಳಿರಲು ಸ್ಥಳವಿಲ್ಲವಿಷಮರ ದುಸ್ಸಂಗ ಪಡೆದರೇನುಂಟು 1
ಊರ ಹಂದಿಗೆ ಅಲಂಕಾರವ ಮಾಡಲುನಾರುವ ದುರ್ಗಂಧ ಬಿಡಬಲ್ಲುದೆಸಾರ ತತ್ತ್ವಜಾÕನ ಪಾಪಿಗೆ ಹೇಳಲುಕ್ರೂರಬುದ್ಧಿಯ ಬಿಟ್ಟು ಸಜ್ಜನವಪ್ಪಗೆ ? 2
ತನ್ನಿಂದ ಉಪಕಾರ ತೊಟಕಾದರೂ ಇಲ್ಲಬಿನ್ನಣ ಮಾತುಗಳು ಮೊದಲೆ ಇಲ್ಲಪನ್ನಗಶಯನ ಪುರಂದರವಿಠಲನಲ್ಲದೆಅನ್ಯದೈವಂಗಳ ಭಜಿಸದೆ ನರರು 3
*******
ಜಾಲಿಯ ಮರದಂತೆ ಧರೆಯೊಳು ದುರ್ಜನರು
ಜಾಲಿಯ ಮರದಂತೆ ಮೂಲಾಗ್ರ ಪರಿಯಂತ
ಮುಳ್ಳು ಕೂಡಿಪ್ಪಂಥ ||
ಬಿಸಿಲಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣೂ ಇಲ್ಲ
ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವದವೂ ವಿಷದಂತೆ ಇರುತಿಹ ||
ಊರಹಂದಿಗೆ ಷಡ್ರಸಾನ್ನವಿಕ್ಕಲು
ನಾರುವ ಗಂಧವ ಬಿಡುವುದುಂಟೆ
ಘೋರ ಪಾಪಿಗೆ ತತ್ವಜ್ಞಾನ ಹೇಳಿದರೆ
ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ ||
ತನ್ನಿಂದ ಉಪಕಾರ ತಟುಕಾದರೂ ಇಲ್ಲ
ಬಿನ್ನಣ ಮಾತಿಗೆ ಕೊನೆಯಿಲ್ಲವೋ
ಅನ್ನಕ್ಕೆ ಸೇರಿಹ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರವಿಠಲ ||
*****