Showing posts with label ಏನು ರಂಗ ದೂರ ನೋಡುವೆ ಪ್ರಾಣನಾಥ ದೂರ ನೋಡುವೆ prasannavenkata ENO RANGA DOORA NODUVE PRANANATHA DOORA NODUVE. Show all posts
Showing posts with label ಏನು ರಂಗ ದೂರ ನೋಡುವೆ ಪ್ರಾಣನಾಥ ದೂರ ನೋಡುವೆ prasannavenkata ENO RANGA DOORA NODUVE PRANANATHA DOORA NODUVE. Show all posts

Tuesday, 9 November 2021

ಏನು ರಂಗ ದೂರ ನೋಡುವೆ ಪ್ರಾಣನಾಥ ದೂರ ನೋಡುವೆ ankita prasannavenkata ENO RANGA DOORA NODUVE PRANANATHA DOORA NODUVE

by ಪ್ರಸನ್ನವೆಂಕಟದಾಸರು

ಏನು ರಂಗ ದೂರ ನೋಡುವೆ ಪ್ರಾಣನಾಥ ದೂರ ನೋಡುವೆ ಪ.

ಒಳ್ಳೆ ನಾರಿಯರೊಳು ಮನವಿಟ್ಟು ನೀನನ್ನಸಲ್ಲದವಳ ಕೈಯವಿಡಿದ್ಯೇಕೆ ಮೊದಲಿಗೆ 1

ಏಸುಮನೆಯ ಹೊಕ್ಕು ದಣಿದೆ ಕಾಣದೆ ಕೃಷ್ಣಆಸು ಮನೆಯೊಳು ನೀನಿದ್ದು ಕಾಣಿಸಿಕೊಳ್ಳೆ 2

ನಿನ್ನವಳೆನಿಸಿದ ಬಳಿಕ ಮಾತಾಡದೆಅನ್ಯಾಶ್ರಯ ನನಗಿದ್ದರೆ ಹೇಳು ನನ್ನಾಣೆ 3

ನೀ ಪರಿಹರಿಸಲಾರದ ತಪ್ಪೆನ್ನಲ್ಲುಂಟೇನೊಈ ಪರಿಗಾಳ ಬಳಲಿಸಿ ಸುಮ್ಮನೆ 4

ದೂರ ನೋಡಿದರೆ ನೀನೋಡುನಾ ಬಿಡೆನೆಂಬೆದೂರ ಸಾರಿ ನಿನ್ನ ಪೋಗಲಾರೆ ಪ್ರಸನ್ವೆಂಕಟೇಶ 5
****