Showing posts with label ಕಂಡೆ ಕಂಡೆ ಗುರುಗಳ ಕಂಡೆ ಕಂಡೆ ಕಂಡೆ ಗುರುರಾಘವೇಂದ್ರರ kanteshapriya vittala. Show all posts
Showing posts with label ಕಂಡೆ ಕಂಡೆ ಗುರುಗಳ ಕಂಡೆ ಕಂಡೆ ಕಂಡೆ ಗುರುರಾಘವೇಂದ್ರರ kanteshapriya vittala. Show all posts

Wednesday, 1 September 2021

ಕಂಡೆ ಕಂಡೆ ಗುರುಗಳ ಕಂಡೆ ಕಂಡೆ ಕಂಡೆ ಗುರುರಾಘವೇಂದ್ರರ ankita kanteshapriya vittala

  ರಾಗ: ಮಧ್ಯಮಾವತಿ ತಾಳ: ಆದಿ

ಕಂಡೆ ಕಂಡೆ ಗುರುಗಳ ಕಂಡೆ ಕಂಡೆ


ಕಂಡೆ ಗುರುರಾಘವೇಂದ್ರರ ಕೋ-

ದಂಡಪಾಣಿಯ ನೋಡಿನಲಿವರ

ಕಂಡಭಕ್ತರಭೀಷ್ಟಸಲಿಪರ

ದಂಡಕಾಷಾಯವಸ್ತ್ರಧಾರಿಯ ಅ ಪ


ತರಳನಿರಲು ತಂದೆ ಹಿರಣ್ಯಕಗೆ

ನರಹರಿಯ ಕಂಬದಲಿತೋರಿದ

ಗುರುವ್ಯಾಸರೆನಿಸಿಬಂದೀಭುವಿಯೊಳು

ಗುರುಮಧ್ವರಮತ ಜಗಕೆಸಾರಿದ 1

ತುಂಗಭದ್ರಾನದಿಯತೀರದಿ

ಕಂಗೊಳಿಪ ವೃಂದಾವನದೊಳಿರುತಲಿ

ಮಂಗಳಾಂಗ ಶ್ರೀಮೂಲರಾಮನ

ಕಂಗಳಿಂದಲಿ ನೋಡಿ ಸ್ತುತಿಪರ 2

ಗುರುಸುಧಿಂದ್ರರ ಕರುಣಪಾತ್ರರ

ಸ್ಮರಣೆಮಾತ್ರದಿ ಅಘವತೊರೆವರ

ಪರಮಪುರುಷಹರಿಯ ಚರಣದೊಳ್

ಸ್ಥಿರಭಕುತಿಯಿತ್ತು ಸತತಕಾಯ್ವರ 3

ಮೂರೆರಡುಮೇಲೊಂದಧಿಕಶತ

ವರುಷ ವೃಂದಾವನದೊಳಿರುತಲಿ

ಆರಾಧನೆಯಕೈಗೊಳುತ ನಿತ್ಯದಿ

ಕೋರಿದಿಷ್ಟಾರ್ಥಗಳನೆ ಕೊಡುವರ 4

ಧರೆಯೊಳಗೆ ಮಂಚಾಲೆಕ್ಷೇತ್ರಕೆ

ಸರಿಮತ್ತೊಂದಿಲ್ಲ ದಿಟವಿದು

ಕರಿವರದ ಕಾಂತೇಶಪ್ರಿಯವಿಠಲನ

ಸ್ಮರಣೆಯೊಳನವರತಲಿಪ್ಪರ 5

***