ರಾಗ: ಮಧ್ಯಮಾವತಿ ತಾಳ: ಆದಿ
ಕಂಡೆ ಕಂಡೆ ಗುರುಗಳ ಕಂಡೆ ಕಂಡೆ ಪ
ಕಂಡೆ ಗುರುರಾಘವೇಂದ್ರರ ಕೋ-
ದಂಡಪಾಣಿಯ ನೋಡಿನಲಿವರ
ಕಂಡಭಕ್ತರಭೀಷ್ಟಸಲಿಪರ
ದಂಡಕಾಷಾಯವಸ್ತ್ರಧಾರಿಯ ಅ ಪ
ತರಳನಿರಲು ತಂದೆ ಹಿರಣ್ಯಕಗೆ
ನರಹರಿಯ ಕಂಬದಲಿತೋರಿದ
ಗುರುವ್ಯಾಸರೆನಿಸಿಬಂದೀಭುವಿಯೊಳು
ಗುರುಮಧ್ವರಮತ ಜಗಕೆಸಾರಿದ 1
ತುಂಗಭದ್ರಾನದಿಯತೀರದಿ
ಕಂಗೊಳಿಪ ವೃಂದಾವನದೊಳಿರುತಲಿ
ಮಂಗಳಾಂಗ ಶ್ರೀಮೂಲರಾಮನ
ಕಂಗಳಿಂದಲಿ ನೋಡಿ ಸ್ತುತಿಪರ 2
ಗುರುಸುಧಿಂದ್ರರ ಕರುಣಪಾತ್ರರ
ಸ್ಮರಣೆಮಾತ್ರದಿ ಅಘವತೊರೆವರ
ಪರಮಪುರುಷಹರಿಯ ಚರಣದೊಳ್
ಸ್ಥಿರಭಕುತಿಯಿತ್ತು ಸತತಕಾಯ್ವರ 3
ಮೂರೆರಡುಮೇಲೊಂದಧಿಕಶತ
ವರುಷ ವೃಂದಾವನದೊಳಿರುತಲಿ
ಆರಾಧನೆಯಕೈಗೊಳುತ ನಿತ್ಯದಿ
ಕೋರಿದಿಷ್ಟಾರ್ಥಗಳನೆ ಕೊಡುವರ 4
ಧರೆಯೊಳಗೆ ಮಂಚಾಲೆಕ್ಷೇತ್ರಕೆ
ಸರಿಮತ್ತೊಂದಿಲ್ಲ ದಿಟವಿದು
ಕರಿವರದ ಕಾಂತೇಶಪ್ರಿಯವಿಠಲನ
ಸ್ಮರಣೆಯೊಳನವರತಲಿಪ್ಪರ 5
***
No comments:
Post a Comment