Showing posts with label ನೀರಧಿಶಯನ ಮುಕುಂದ ಹರಿನಾರಾಯಣ ಗೋವಿಂದ lakshmikanta. Show all posts
Showing posts with label ನೀರಧಿಶಯನ ಮುಕುಂದ ಹರಿನಾರಾಯಣ ಗೋವಿಂದ lakshmikanta. Show all posts

Sunday, 1 August 2021

ನೀರಧಿಶಯನ ಮುಕುಂದ ಹರಿನಾರಾಯಣ ಗೋವಿಂದ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ನೀರಧಿಶಯನ ಮುಕುಂದ

ಹರಿನಾರಾಯಣ ಗೋವಿಂದ ಪ


ಪ್ರಚಲಿತ ಲಯ ಜಲ ವಿಹರಣ ಶಾಶ್ವತ

ಅಚಲೋದ್ಧರಣ ಸಮರ್ಥ ಸದಾಶ್ರಿತ

ಕಾಂಚನ ನಯನ ವಿಘಾತ ನರ

ಪಂಚಾನನ ಪ್ರಖ್ಯಾತ 1


ಮಂದಾಕಿನಿ ಪಿತ ದೇವ ತ್ರಿವಿಕ್ರಮ

ನಂದಿತ ಗೋಕುಲ ವೃಂದ ಪರಾಕ್ರಮ

ಸಿಂಧುನಿಬಂಧನ ರಾಮಾನಂದದ

ಸುಂದರ ಶ್ಯಾಮ 2


ಲೋಕ ವಿಮೋಹಕ ಬುದ್ಧ ಸುವೇಶ

ಶ್ರೀಕರ ಕಲ್ಕಿ ಪಾಹಿ ನಿರ್ದೋಷ

ಕಾಕೋದರ ಗಿರಿವಾಸ ಜಯ

ಶ್ರೀಕಾಂತ ಶ್ರೀ ಶ್ರೀನಿವಾಸ 3

***