Showing posts with label ಕುಂದಣಾರುತಿ ತಾರೆ ಸಖಿ ಸಿಂಧುನಂದನೆಗಿಂದು ಮುಖಿ shyamasundara. Show all posts
Showing posts with label ಕುಂದಣಾರುತಿ ತಾರೆ ಸಖಿ ಸಿಂಧುನಂದನೆಗಿಂದು ಮುಖಿ shyamasundara. Show all posts

Wednesday, 1 September 2021

ಕುಂದಣಾರುತಿ ತಾರೆ ಸಖಿ ಸಿಂಧುನಂದನೆಗಿಂದು ಮುಖಿ ankita shyamasundara

 ..

ಕುಂದಣಾರುತಿ ತಾರೆ ಸಖಿ | ಸಿಂಧುನಂದನೆಗಿಂದು ಮುಖಿ ಪ

ಕೃತಿ ಶಾಂತಿ ಜಯೆ ಮಾಯೆ | ಕ್ಷಿತಿಜಾತೆಗೆ | ವಿಧಿ ಮಾತೆಗೆ

ವರದಾತೆಗೆ | ಕೃತಿಲೀಲೆ ನುತಿನೀಲೆ ರುಕ್ಮಿಣಿಗೆ 1

ಜಂಭಾರಿ ವಂದಿತೆ ಶ್ರೀರಂಬೆಗೆ ಜಗದಂಬೆಗೆ |

ಸುನೀತಾಂಬೆಗೆ | ಅಂಬುಜ ಮಂದಿರ ಅಂಭ್ರಣಿಗೆ 2

ಶ್ರೀ ಶಾಮಸುಂದರನರ್ಧಾಂಗಿಗೆ ಶುಭಾಂಗಿಗೆ |

ದಯಾಪಾಂಗೆಗೆ | ಭೂಸುರ ಸುಚರಿತ ಭಾರ್ಗವಿಗೆ 3

***