ನುಡಿದಂತೆ ನಡಿಯಬೇಕು ಪಿಡಿದು ಸುಪಥ ಪ
ಸಾಧಿಸಿ ತಿಳಿಯದೆ ತನ್ನೊಳು ಖೂನ ಬೋಧಿಸಿ ಹೇಳುದು ಇನ್ನೊಬ್ಬರಿಗೇನ ಅದಿತತ್ವದ ಗತಿಯ ನಿಜಸ್ಥಾನ ಭೇದಿಸುವುದು ಸದ್ಗುರು ಕೃಪೆ ಙÁ್ಞನ 1
ನಡೆನುಡಿ ಒಂದಾದರೆ ಬಲು ಮೇಲು ದೃಢಭಕ್ತಿಗೆ ಒಂದಿದೆ ತಾ ಕೀಲು ಪಡೆವದು ಮನಮಾಡಿ ಮೀಸಲು ಬಿಡದೆ ಮಾಡುವ ಗುರು ದಯ ಕೃಪಾಳು 2
ಹೇಳಿಕಿಗಿದೆ ಬಿದ್ದದೆ ಬಲುಜನ ತಿಳುಹಿಸಿಕೊಡಲಿಕ್ಕಿಲ್ಲದೆ ಙÁ್ಞನ ತಿಳಿವು ತಿಳಿದರೆ ತನ್ನೊಳು ನಿಧಾನ ಹೊಳವ ಮಹಿಪತಿ ಗುರು ನಿಜ ಚಿದ್ಘನ 3
***