Showing posts with label ವೆಂಕಟಾಚಲ ವಾಸ ವಂದಿಪೆನೋ pranesha vittala. Show all posts
Showing posts with label ವೆಂಕಟಾಚಲ ವಾಸ ವಂದಿಪೆನೋ pranesha vittala. Show all posts

Saturday, 16 November 2019

ವೆಂಕಟಾಚಲ ವಾಸ ವಂದಿಪೆನೋ ankita pranesha vittala

by ಪ್ರಾಣೇಶದಾಸರು
ವೆಂಕಟಾಚಲ ವಾಸ ವಂದಿಪೆನೋ ತವ ಪದ |ಪಂಕಜವ ನಿರ್ದೋಷ ವಾರಾಶಿಜಾದ್ರುಹಿಣ|ಶಂಕರ ಪ್ರಮುಖ ಪೋಷ ಶ್ರೀ ಶ್ರೀನಿವಾಸ ಪ

ವೆಂಕಟ ಗದಾ ಸುದರುಶನವಿಜಯ|ಅಂಕಿತನೆಗಾಂಗೇಯಚೈಲತ- |ಳಂಕ ನನುಜ ಪಾಲಿಪುದು ಯನ್ನ ಮೀ |ನಾಂಕ ಜನಕ ಶಶಾಂಕ ಭಾಸ ಅ.ಪ.

ಸ್ವಾಮಿ ಹೇ ನಿರಪೇಕ್ಷಝಷಕೂರ್ಮವರಾಹ|ಹೇಮಕಶ್ಯಪು ತೀಕ್ಷವಟುಭೃಗು ಕುಲೋದ್ಭವ ||ರಾಮ ಪಾಂಡವಪಕ್ಷ ತ್ರಿಪುರಾರಿ ಕಲ್ಕಿ |ಭೀಮವಂದಿತ ತ್ರ್ಯಕ್ಷಸಖವ್ರತತಿಜಾಕ್ಷ ||ಕಾಮಿತಪ್ರದ ಕೈರವದಳಶ್ಯಾಮಸುಂದರ ಕೋಟಿಮಾರಸು- |ಧಾಮಪ್ರಿಯ ಭಯವಿಪಿನವಹ್ನಿಸು ||ತ್ರಾಮ ನಂದನ ಪ್ರಾಣರಕ್ಷಕ |ಭೂಮಿಯೊಳು ದುರುಳರಿಪು ಸಾಲಿ ||ಗ್ರಾಮ ಮಂದಿರ ಲಕುಮೀ ಮನೋಹರ |ಸಾಮಜೇಂದ್ರನ ಪೊರೆದ ಸಹಸ್ರನಾಮ ಕಾಳೀಮದಾಹ ದೇವತ್ರ ||ಈಮಾಯಾತೃಣಕಾಷ್ಠಾದಿ ವ್ಯಾಪುತ |ಚಾಮೀಕರಭೂಷಣ ಶೋಭಿತ ||ಹೇಮಾಚಲ ಮಂದಿರ ಮುನಿಗಣಸೋಮಾರ್ಚಿತ ಕರುಣಿಸು ತ್ವರ್ಯಾ 1

ನೀರಚರನಗಧರಕಿಟಿನೃಹರಿ ವಾಮನ |ಧರಣಿಪ ಸಂಹರ ಕೋದಂಡಕರ ಸ- ||ತ್ಯಾರಮಣಅಂಬರವರ್ಜಿತ |ತುರಂಗಮವೇರಿಕುಂಭಿಣಿಭಾರವಿಳುಹಿದ ಉದಾರ ||ಪರಾಶರ ಸುತ ಕಪಿಲರೂಪಿ ಸ- |ಮೀರ ವಂದ್ಯ ಅನಸೂಯವರಕುಮಾರ ಪು- ||ಷ್ಕರ ಕೇಶನನುಜ ಮಂದಾರನತ ಜನವಿಶ್ವ|ಧರಣ ಶರೀರವ್ಯೋಮಸಂತ್ಪತಿ ನಘ ತು- ||ಷಾರ ಗಣ ವೈದುವರೊ ನಿನ್ನಯಾ |ಪಾರಮಹಿಮೆಯ ತಿಳಿಯಲಾರರುನೀರಜಾಕ್ಷ|| ಯ ||ಪಿತಾಮಾತಾ ಮಹಿಮಯ ||ಕ್ಕಾರಿಂದೊಶ ಅಗ್ನಿಭಯ ನಿವಾರಣ ||ಸಾರೆಗರೆದು ಪೂರೈಸಭಿಲಾಷೆಯ |ಘೋರಿಸುತಿಹ ತಾಪತ್ರಯ ಬಿಡಿಸೊ ರ- |ಮಾರಮಣನೇ ಪ್ರಣತಾರ್ಥಿ ಪರಿಹರ 2

ವೇದೋದ್ಧರಕೂರ್ಮಈ ಕ್ಷಿತಿಯ ಮಾಯದಲೊ- |ಯ್ದದುರ್ಮತಿ ಭರ್ಮ ಲೋಚನರತರಳಪ್ರ- ||ಹ್ಲಾದ ವರದ ಸುಕರ್ಮಸ್ಥಿತ ಮಾತೃಹಿಂಸಕ |ನಾದ ನಿರಶ ಸುಶರ್ಮ ಪ್ರಮುಖರನ ಮರ್ಮ ||ಭೇದಿಸೇಳಿದ ಭೈಷ್ಮೀವಲ್ಲಭ|ಶ್ರೀದಬುದ್ಧಖಳಕುಲಭಂಜನ||ಬಾದರಾಯಣನಿಗಮವೇದ್ಯನೆ |ಮೋದಮಯ ಪ್ರಾಣೇಶ ವಿಠ್ಠಲ ||ಕಾದುಕೋ ನಿನ್ನವರನು ಎಂದಾದಿಮಧ್ಯ |ವಿದೂರ ಯನ್ನ ವಿಷಾದಗುಣಗಳೆಣಿಸದೆ ಕುಬುಜೆಗೆ ||ಮೋದತೋರಿದ ದೀನಬಂಧು |ಶ್ರೀಧರಕೌಸ್ತುಭವಕ್ಷಸ್ಥಳ ||ದ್ವಾದಶವಪು ಸನ್ನಿಭ ನಿನ್ನಯ ಕ್ರೋಧಿಗಳೊಳು ಸ್ನೇಹವ ಪುನರಪಿ |ಮೇದಿನಿಯೊಳು ಜನ್ಮವ ಕೊಡದಿರು 3
*******