Showing posts with label ಕಾದನಾ ವತ್ಸವ ಹರಿ ಕಾದನಾ ಮಾಧವ ವೇದವೇದ್ಯ vijaya vittala KAADANAA VATSAVA HARI KAADANAA MAADHAVA VEDAVEDYA. Show all posts
Showing posts with label ಕಾದನಾ ವತ್ಸವ ಹರಿ ಕಾದನಾ ಮಾಧವ ವೇದವೇದ್ಯ vijaya vittala KAADANAA VATSAVA HARI KAADANAA MAADHAVA VEDAVEDYA. Show all posts

Friday, 17 December 2021

ಕಾದನಾ ವತ್ಸವ ಹರಿ ಕಾದನಾ ಮಾಧವ ವೇದವೇದ್ಯ ankita vijaya vittala KAADANAA VATSAVA HARI KAADANAA MAADHAVA VEDAVEDYA



ಕಾದನಾ ವತ್ಸವ ಹರಿ ಕಾದನಾ ಮಾಧವ ಪ

ವೇದವೇದ್ಯ ಸಾಧುವಿನುತ ರಾದಿಕಾ ರಮಣ ಕೃಷ್ಣ ಅ.ಪ.

ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ವತ್ಸಗಳನೆ ನಿಲಿಸಿ ||
ಕೊಳಲು ಕೈಲಿ ಪಿಡಿದು ಮುರಲಿಗಾನ ಮಾಡುತ್ತಾ 1

ತನ್ನ ಶೆರಗು ತೆಗೆದು ಕೃಷ್ಣ ಕರುಗಳನ್ನೆ ಬೆನ್ನೊರಿಸಿ |
ತಿನ್ನು ತಿನ್ನು ಪುಲ್ಲು ಯೆನುತ ಘನ್ನ ಕರುಗಳೊತ್ತುತ್ತ 2

ಉಡುಗಳಂತೆ ಕರಗಳು ನಡುವೆ ಚಂದ್ರ ಧರೆಯೊಳು ||
ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು3

ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು |
ಬಂದು ವರುಷ ಕರುಗಳಂತೆ ಆನಂದದಿಂದ ಬೆಳೆದವು 4

ಕನಕ ರಜತ ಸರಪಳಿ ದನಕರುಗಳ ಕೊರಳಲ್ಲಿ |
ಇಣಕುವಂತರಳೆಲೆ ಅನೇಕ ನಾದ ಬೆರಳಲಿ ಮಾಡುತ5

ಮರದ ನೆರಳು ವೊಳಗೆ ಕೃಷ್ಣ | ಮೆರೆದು ವತ್ಸಗಳನೇ ನಿಲಿಸಿ |
ಕರೆದ ಪಾಲು ಕರದಿ ಪಿಡಿದು ನೆರೆದು ಬಾಯಲುಣಿಸುತ6

ಅಜಗಳ್ಹಾಂಗ ಇದ್ದ ಕರುಗಳು ಗಜಗಳ್ಹಾಂಗ ಆದವು |
ತ್ರಿಜಗದೊಡೆಯ ವಿಜಯವಿಠ್ಠಲ ವ್ರಜಕೆ ದೊರೆಯಾಳುವ | 7
***


kAdana vatsava hari kAdana || p ||
vEdavEdya sAdhu vandita rAdhikA ramaNa kruSNa || a. p ||

eLegarike iruva sthaLadi neredu vatsagaLane nilisi koLalu tanna kaili piDidu muraLigaana mADuta |
tanna seragu tegedu kruSNa karugaLa bennoresi tinnu tinnu hullu enuta tanna karadindottutA || 1 ||

uDugaLante karugaLA naDuve candra dhareyoLu poDaviyoLage beLagalu aa mruDanu koNDADalu |
ondu tingaLa karugaLu indirEshanu mEyisalu ondu varuSada karugaLante chandadinda beLedavu || 2 ||

kanaka rajata sarapaLi danakarugaLa koraLali minugutippa araLele anEka naadadindali |
ajagaLantidda karugaLu gajagaLante Adavu trijagadoDeya vijayaviThala vrajake dore ALalu || 3 ||
***

pallavi

kAdana vatsava hari kAdana vEdavEdya sAdhu vandita rAdhikA ramaNa kruSNa

caraNam 1

eLegarike iruva sthaLadi karedu vatsugaLane nilisi koLalu tanna kaili piDidu muraLigaana mADuta
tanna seragu tegedu kruSNa karugaLanne bennoresi tinnu tinnu hullu enuta tanna karadindottutA

caraNam 2

uDugaLante karugaLA naDuve candra dhareyoLu poDaviyoLage beLagalu aa mruDanu koNDADalu
ondu tingaLa karugaLu indirEshanu mEyisalu ondu varuSa karugaLante chandadinda beLedavu

caraNam 3

kanaka rajata sarapaLi danakarugaLa koraLali minugutippa araLele anEka naadadindali
ajagaLantidda karugaLu gajagaLante Adavu trijagadoDeya vijayaviThala vrajake dore ALuva
***


ಕಾದನಾ ವತ್ಸವ ಹರಿ ಕಾದನಾ
ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ                       ।।ಪ।।

ಎಳಗರಿಕೆಯಿರುವ ಸ್ಥಳದಿ ನೆರೆದು ವತ್ಸಗಳನೆ ನಿಲಿಸಿ 
ಕೊಳಲು ತನ್ನ ಕೈಲಿ ಪಿಡಿದು ಮುರಳಿಗಾನ ಮಾಡುತ
ತನ್ನ ಸೆರಗು ತೆಗೆದು ಕೃಷ್ಣ ಕರುಗಳ ಬೆನ್ನು ವರಿಸಿ ತಿನ್ನು ತಿನ್ನು  ಹುಲ್ಲು ಎನ್ನುತ ತನ್ನ ಕರದಿಂದ ಒತ್ತುತ್ತ             ।।೧।।

ಉಡುಗಳಂತೆ ಕರುಗಳ ನಡುವೆ ಚಂದ್ರಧಾರೆಯೊಳು |
ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು  ||
ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು 
ಒಂದು ವರುಷದ ಕರುಗಳಂತೆ ಚಂದದಿಂದ ಬೆಳೆದವು   ।।೨।।

ಕನಕ ರಜತ ಸರಪಳಿ ದನ-ಕರುಗಳ ಕೊರಳಲ್ಲಿ ಮಿನುಗು ತಿಪ್ಪ ಅರಳೆಲೆ ಅನೇಕ ನಾದ ದಿಂದಲಿ ಅಜ ಗಳಂತಿ ಪ್ಪ ಕರುಗಳು ಗಜ ಗಳಂತೆ ಆದವು  ತ್ರಿಜಗದೋಡೆಯ ವಿಜಯವಿಠಲ ವೃಜಕೆ ದೊರೆ ಅಳಲು || ೩ ||
***


ರಾಗ : ಯಮನ್ ಕಲ್ಯಾಣಿ  ತಾಳ : ರೂಪಕ (raga, taala may differ in audio)

ಕಾದನಾ ವತ್ಸವ ಹರಿ ಕಾದನಾಮೋದದಿಂದ ಮಾಧವ 
ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ                       ।।ಪ।।

ಎಳಗರಿಕೆಯಿರುವ ಸ್ಥಳದಿ ನೆರೆದು ವಸ್ತುಗಳನೆ ನಿಲಿಸಿ 
ಕೊಳಲು ತನ್ನ ಕೈಲಿ ಪಿಡಿದು ಮುರಳಿಗಾನ ಮಾಡುವ                 ।।೧।।

ಮರದ ನೆರಳಿಗೆ ಕೃಷ್ಣ ಕರುಗಳನ್ನ ನಿಲ್ಲಿಸಿ 
ಕರೆದು ಪಾಲು ಕರೆದು ತಂದು ಬಾಯೊಳುಣಿಸುತ್ತ                       ।।೨।।

ಉಡುಗಳಂತೆ ಕರುಗಳು ನಡುವೆ ಚಂದ್ರಧಾರೆಯೊಳು
ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು                ।।೩।।

ಒಂದು ತಿಂಗಳ ಕರುಗಳು ಇಂದಿರೇಶ ಮೇಯಿಸಲು 
ಒಂದು ವರುಷ ಕರುಗಳಂತೆ ಆನಂದದಿಂದಲಿ ಬೆಳೆದವು               ।।೪।।
***