ಹೊರ ಹೋಗಿ ಆಡದಿರೊ ಹರಿಯೆ-|ಎನ್ನ ದೊರೆಯೆ ಪ
ಮನೆಯೊಳಗಾಡುವುದೆ ಚೆಂದ - ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ||ವನಿತೆಯರು ಮೋಹದಿಂದ - ನಿನ್ನ |ಮನವಸಹರಿಸಿಕೊಂಬುವರೋ ಗೋವಿಂದ 1
ಏನು ಬೇಡಿದರೂ ನಾ ಕೊಡುವೆ-ಕೆನೆ-|ಬೆಣ್ಣೆ ಕಜ್ಜಾಯವ ಕೈಯೊಳಗಿಡುವೆ ||ನಿನ್ನ ಗುಣಗಳನು ಕೊಂಡಾಡುವೆ - ನಿನಗೆ |ಚಿನ್ನ ರನ್ನದ ಅಲಂಕಾರಗಳಿಡುವೆ 2
ಹೊಲಸು ಮೈಯವನೆನ್ನುವರೊ-ದೊಡ್ಡ |ಕುಲಗಿರಿಯನ್ನು ಪೊತ್ತವನೆನ್ನುವರೊ ||ಬಲುಕೇಶದವನೆನ್ನುವರೊ-ಆ |ಎಳೆಯನನೆತ್ತಿದ ಕುರೂಪಿಯೆಂಬುವರೊ 3
ಭಿಕ್ಷೆಬೇಡಿದೆ ಎಂಬುವರೊ-ಭೂಮಿ |ರಕ್ಷಿಪ ರಾಯರ ಕದಡಿದೆಯೆಂಬುವರೊ ||ಲಕ್ಷ್ಮಿಯ ಕಳೆದೆಯೆಂಬುವರೊ-------ವೈ-|ಲಕ್ಷಣ ಬೆಣ್ಣೆಯ ಕದ್ದೆಯೆಂಬುವರೊ 4
ಮಾನಬಿಟ್ಟವನೆನ್ನುವರೊ-ಮಹಾ |ಹೀನರ ಬೆನ್ನಟ್ಟಿ ಹೋದನೆಂಬುವರೊ ||ದಾನವವೈರಿಯೆಂಬುವರೊ-ಸುರ-|ರಾನತ ಪುರಂದರವಿಠಲನೆಂಬುವರೊ 5
********