Showing posts with label ನಂಬಿ ತುತಿಸಿರೋ ರಾಘವೇಂದ್ರ ಧೊರೆಯ gurujagannatha vittala. Show all posts
Showing posts with label ನಂಬಿ ತುತಿಸಿರೋ ರಾಘವೇಂದ್ರ ಧೊರೆಯ gurujagannatha vittala. Show all posts

Friday, 27 December 2019

ನಂಬಿ ತುತಿಸಿರೋ ರಾಘವೇಂದ್ರ ಧೊರೆಯ ankita gurujagannatha vittala

ನಂಬಿ ತುತಿಸಿರೋ ರಾಘವೇಂದ್ರ ಧೊರೆಯ
ಸನ್ಮುನಿ ಕುಲವರ್ಯ                || ಪ ||
ಅಂಬುಜನಾಭನಿಗತಿ ಪ್ರೀಯ
ಸಜ್ಜನರಿಗೆ ಸಹಾಯ್ಯ            || ಅ ||

ಕನಕಶಯ್ಯನಾ ತನುಜನಾಗಿ ಜನಿಸಿ – ನರಹರಿಅಯನು ಒಲಿಸಿ
ಅನುಜರಿಗನುದಿನ ತತ್ತ್ವವ ತಾ ಕಲಿಸಿ ಪರಮತವನ್ನು ಜಯಿಸಿ
ಮನದಲಿ ಶ್ರೀ ಹರಿ ಪದವನ್ನೇ ಭಜಿಸಿ ವರಕರುಣವ ಸಲಿಸಿ
ವನಜಭವಾಂಡದಿ ಬಹು ಬಲ್ಲಿದನೆನಿಪ – ನತಜನರಿಗೆ ಸುರಪ        || ೧ ||

ಕಾಮಧೇನು ಸುರತರುವಿಗೆ ಸಮನೀತ ಕಾಮಿತ ಫಲದಾತ
ರಾಮ ನರಹರಿ ಕೃಷ್ಣರ ಪದದೂತ ಲೋಕದಿ ಬಹು ಖ್ಯಾತ
ಕಾಮಿನಿ ಸುತ ಧನ ಧಾನ್ಯದವ್ರಾತ ನೀಡುವೋ ನೀತ
ಪ್ರೇಮದಿ ನಿಜಜನಸ್ತೋಮಕೆ ಬಹುದಾತ ಯತಿವರಕುಲನಾಥ    || ೨ ||

ಪಾತಕವನಕುಲವೀತಿಹೋತ್ರನೆನಿಸೀ ಸುಖವನು ಸುರಿಸಿ
ಭೂತಪ್ರೇತ ಮಹಭೀತಿಯ ಬಿಡಿಸಿ ರೋಗವ ಪರಿಹರಿಸಿ
ಮಾತಪಿತರ ತೆರ ದೂತರ ರಕ್ಷಿಸಿ ಮನೋಚಿಂತನೆಯ ಬಿಡಿಸಿ
ದಾತ ಗುರು ಜಗನ್ನಾಥ ವಿಠ್ಠಲನ ಪದದೂತ – ನಿಜಜನರಿಗೆ ತಾತ        || ೩ ||
*******