kruti by bhupati vittalaru ( kakhandaki Ramacharyaru)
ಬರಬೇಕು ಇಂದಿಲ್ಲಿಗೆ ಇಂದಿರೆರಮಣಾ ಪ
ಬಾರಯ್ಯಾ ಶ್ರೀಹರಿ 'ವಿಠ್ಠಲ ವೆಂಕಟರಮಣಾಉಡುಪಿಯ ಶ್ರೀಕೃಷ್ಣಾ ಬದರಿನಾರಾಯಣಾ ಅ.ಪ
ಕರಿರಾಜ ಕರೆಯಲು ಕರುಣಸಾಗರ ನೀನುಗರುಡವಾಹನನಾಗಿ ಭರದಿಂದ ಬಂದಂತೆ 1
ಭಕ್ತ ಬಾಲನ ಮಾತು ಸತ್ಯಮಾಡಲು ನೀನುತತ್ಕ್ಷಣ ಸ್ತಂಭದಿಂ ಪುಟಿದು ನೀ ಬಂದಂತೆ 2
ಸಚ್ಚಿದಾನಂದಾತ್ಮ ಸರ್ವತ್ರ ಪರಿಪೂರ್ಣಭಕ್ತವತ್ಸಲ ಶ್ರೀ ಭೂಪತಿವಿಠ್ಠಲ ಸ್ವಾಮಿ 3
***