csr
ಗೋವಿಂದಾ ನಮೋ ಗೋವಿಂದಾ ನಮೋ
ಗೋವಿಂದಾ ನಾರಾಯಣ
ಗೋವರ್ಧನ ಗಿರಿಯನೆತ್ತಿದ
ಗೋವಿಂದಾ ನಮ್ಮ ರಕ್ಷಿಸೈ ||
ಮಂಚ ಬಾರದು ಮಡದಿ ಬಾರಳು
ಕಂಚು ಕನ್ನಡಿ ಬಾರದು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿದ ಧರ್ಮವೆ ||
ಅರ್ಥವ್ಯಾರಿಗೆ ಪುತ್ರರ್ಯಾರಿಗೆ
ಮಿತ್ರ ಬಾಂಧವರ್ಯಾರಿಗೆ
ಕರ್ತು ಯಮನವರೆಳೆದು ಒಯ್ವಾಗ
ಅರ್ಥ ಪುತ್ರರು ಕಾಯ್ವರೆ ||
ತಂದು ಬಂದರೆ ತನ್ನ ಪುರುಷನ
ಹಸಿದು ಬಳಲಿದಿರೆಂಬಳು
ಒಂದು ದಿವಸವು ತಾರದಿದ್ದರೆ
ಹಂದಿ ನಾಯಂತೆ ಕೆಲೆವಳು ||
ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣ ಹೋಗಲು ಮುಟ್ಟಲಂಜುವಳು
ಜಾಣೆ ಕರೆದರು ಬಾರಳು ||
ಉಂಟುಕಾಲಕೆ ನೆಂಟರಿಷ್ಟರು
ಬಂಟರಾಗಿ ಕಾಯ್ವರು
ಕಂಟಕೆಮನೋರು ಬಂದು ಎಳೆವಾಗ
ನೆಂಟರಿಷ್ಟರು ಬಾರರು ||
ಒಡೆವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ
ಬಡೆದೆಳೆದು ಯಮನವರು ಒಯ್ವಾಗ
ಎಡವಿ ಬಿದ್ದಿತು ನಾಲಿಗೆ ||
ದಿಟ್ಟತನದಿ ಪಟ್ಟನಾಳಿದ
ವೃಷ್ಟಿ( ವೃಷ್ಣಿ? ) ನಂದನ ಚರಣವ
ಮುಟ್ಟಿ ಭಜಿಸಿರೊ ಸಿರಿಪುರಂದರ
ವಿಟ್ಠಲೇಶನ ಪಾದವ ||
***
pallavi
gOvindA namO gOvindA namO gOvindA nArAyaNa gOvardhana giriyanettida gOvindA namma rakSisai
caraNam 1
manja bhAradu maDadi bAraLu kanju kannaDi bhAradu
sancitArttada dravya bhAradu munce mADida dharmave
caraNam 2
arttavyArige putraryArige mitra bAndhavaryArige
kartu yamanavareLedu oivAga artta putraru kAivare
caraNam 3
tandu bandare tanna puruSana hasidu baLalidirembaLu
ondu divasavu tAradiddare handi nAyente kelevaLu
caraNam 4
prANa vallabhe tanna puruSana kANade nillalAraLu
prANa hOgalu muTTalanjvaLu jANe karedaru bAraLu
caraNam 5
uNTu kAlake neNTariSTaru baNTarAgi kAivaru
kaNTakemanOru bandu eLevAga neNTariSTaru bAraru
caraNam 6
oDeveyarasige oDalu agnige maDadi mattobba celuvage
baDedeLedu yamanavaru oivAga eDavi biddidu nAlige
caraNam 7
diTTatanadi puTTanALida vrSTinandana caraNava
muTTi bhajisiro siri purandara viTTalEshana pAdava
***
ರಾಗ ಆನಂದಭೈರವಿ. ತ್ರಿಪುಟ ತಾಳ (raga tala may differ in audio)
ಗೋವಿಂದಾ ನಮೋ ಗೋವಿಂದಾ ನಮೋ
ಗೋವಿಂದಾ ನಾರಾಯಣ |
ಗೋವರ್ಧನ ಗಿರಿಯನೆತ್ತಿದ
ಗೋವಿಂದಾ ನಮ್ಮ ರಕ್ಷಿಸೋ || Pa ||
ಮಂಚ ಬಾರದು ಮಡದಿ ಬಾರಳು
ಕಂಚು ಕನ್ನಡಿ ಬಾರದು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿದ ಧರ್ಮವೆ || 1 ||
ಅರ್ಥವ್ಯಾರಿಗೆ ಪುತ್ರರ್ಯಾರಿಗೆ
ಮಿತ್ರ ಬಾಂಧವರ್ಯಾರಿಗೆ
ಕರ್ತು ಯಮನವರೆಳೆದು ಒಯ್ವಾಗ
ಅರ್ಥ ಪುತ್ರರು ಕಾಯ್ವರೆ || 2 ||
ತಂದು ಬಂದರೆ ತನ್ನ ಪುರುಷನ
ಹಸಿದು ಬಳಲಿದಿರೆಂಬಳು
ಒಂದು ದಿವಸವು ತಾರದಿದ್ದರೆ
ಹಂದಿ ನಾಯಂತೆ ಕೆಲೆವಳು || 3 ||
ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣ ಹೋಗುವ ಸಮಯದಲ್ಲಿ
ಜಾಣೆ ಕರೆದರು ಬಾರಳು || 4 ||
ಉಂಟುಕಾಲಕೆ ನೆಂಟರಿಷ್ಟರು
ಬಂಟರಾಗಿ ಕಾಯ್ವರು
ಕಂಟಕ ಯಮನವರು ಎಳೆವಾಗ
ನೆಂಟರಿಷ್ಟರು ಬಾರರು || 5 ||
ಒಡೆವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ
ಬಡಿದು ಹೊಡೆದು ಯಮನವರೆಳೆವಾಗ
ಎಡವಿ ಬಿದ್ದಿತು ನಾಲಿಗೆ || 6 ||
ದಿಟ್ಟತನದಲಿ ಪಟ್ಟವಾಳುವ
ಕೃಷ್ಣರಾಯನ ಚರಣವ
ಮುಟ್ಟಿ ಭಜಿಸಿರೊ ಸಿರಿ ಪುರಂದರ
ವಿಠಲೇಶನ ಪಾದವ || 7 ||
***
Gōvindā namō gōvindā namō
gōvindā nārāyaṇa |
gōvardhana giriyanettida
gōvindā nam’ma rakṣisō || pa ||
man̄ca bāradu maḍadi bāraḷu
kan̄cu kannaḍi bāradu
san̄citārthada dravya bāradu
mun̄ce māḍida dharmave || 1 ||
arthavyārige putraryārige
mitra bāndhavaryārige
kartu yamanavareḷedu oyvāga
artha putraru kāyvare || 2 ||
tandu bandare tanna puruṣana
hasidu baḷalidirembaḷu
ondu divasavu tāradiddare
handi nāyante kelevaḷu || 3 ||
prāṇavallabhe tanna puruṣana
kāṇade nillalāraḷu
prāṇa hōguva samayadalli
jāṇe karedaru bāraḷu || 4 ||
uṇṭukālake neṇṭariṣṭaru
baṇṭarāgi kāyvaru
kaṇṭaka yamanavaru eḷevāga
neṇṭariṣṭaru bāraru || 5 ||
oḍeve arasige oḍalu agnige
maḍadi mattobba celuvage
baḍidu hoḍedu yamanavareḷevāga
eḍavi bidditu nālige || 6 ||
diṭṭatanadali paṭṭavāḷuva
kr̥ṣṇarāyana caraṇava
muṭṭi bhajisiro siri purandara
viṭhalēśana pādava || 7 ||
***
Govinda namo govinda namo govinda narayana
Govardhana giriyanettida govinda namma raksisai
Manja bharadu madadi baralu kanju kannadi bharadu
sancitarttada dravya bharadu munce madida dharmave||1||
arttavyarige putraryarige mitra bandhavaryarige
kartu yamanavareledu oivaga artta putraru kaivare||2||
tandu bandare tanna purusana hasidu balalidirembalu
ondu divasavu taradiddare handi nayente kelevalu||3||
prana vallabhe tanna purusana kanade nillalaralu
prana hogalu muttalanjvalu jane karedaru baralu||4||
untu kalake nentaristaru bantaragi kaivaru
kantakemanoru bandu elevaga nentaristaru bararu||5||
odeveyarasige odalu agnige madadi mattobba cheluvage
badedeledu yamanavaru oivaga edavi biddidu nalige||6||
dittatanadi puttanalida vrstinandana caranava
mutti bhajisiro siri purandara vittaleshana padava||7||
***
ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣ
ಗೋವರ್ಧನ ಗಿರಿಯನೆತ್ತಿದ ಗೊವಿಂದ ನಮ್ಮ ರಕ್ಷಿಸೈ
ಮಂಚ ಬಾರದು ಮಡದಿ ಬಾರಳು
ಕಂಚುಕನ್ನಡಿ ಬಾರವು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿರೊ ಧರ್ಮವ
ಅರ್ಥವ್ಯಾರಿಗೆ ಪುತ್ರರ್ಯಾರಿಗೆ
ಮಿತ್ರ ಬಾಂಧವರ್ಯಾರಿಗೆ
ಕರ್ತೃ ಯಮನವರೆಳೆದು ಒಯ್ದಾಗ
ಅರ್ಥಪುತ್ರರು ಕಾಯ್ವರೆ
ತಂದು ಬಂದರೆ ತನ್ನ ಪುರುಷನ
ಬಂದಿರಾ ಬಳಲಿದಿರಾ ಎಂಬಳು
ಒಂದು ದಿವಸ ತಾರದಿದ್ದರೆ
ಹಂದಿನಾಯಂತೆ ಬೊಗಳ್ವಳು
ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣಹೋಗುವ ಸಮಯದಲ್ಲಿ
ಜಾಣೆ ಕರೆದರೆ ಬಾರಳು
ಉಂಟು ಕಾಲಕೆ ನಂಟರಿಷ್ಟರು
ಬಂಟರಾಗಿ ಕಾಯ್ದರು
ಕಂಟಕ ಯಮನವರು ಎಳೆವಾಗ
ನಂಟರಿಷ್ಟರು ಬಾರರು
ಒಡವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ
ಬಡಿದು ಹೊಡೆದು ಯಮನವರೆಳೆವಾಗ
ಎಡವಿ ಬಿದ್ದಿತು ನಾಲಗೆ
ದಿಟ್ಟತನದಲಿ ಪಟ್ಟವಾಳುವ
ಕೃಷ್ಣರಾಯನ ಚರಣವ
ಮುಟ್ಟಿ ಭಜಿಸಿರೊ ಸಿರಿ ಪುರಂದರ
ವಿಟ್ಠಲೇಶನ ಚರಣವ
****
ಗೋವಿಂದಾ ನಮೋ ಗೋವಿಂದಾ
ನಮೋ ಗೋವಿಂದ ನಾರಾಯಣ |
ನಮೋ ಗೋವಿಂದ ನಾರಾಯಣ |
ಗೋವರ್ಧನ ಗಿರಿಯನೆತ್ತಿದ,
ಗೋವಿಂದ ನಮ್ಮ ರಕ್ಷಿಸೋ || ಪ. ||
ಗೋವಿಂದ ನಮ್ಮ ರಕ್ಷಿಸೋ || ಪ. ||
ಮಂಚ ಬಾರದು, ಮಡದಿ
ಬಾರಳು ಕಂಚು ಕನ್ನಡಿ ಬಾರದು||
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿರೋ ಧರ್ಮವ || ೧ ||
ಮುಂಚೆ ಮಾಡಿರೋ ಧರ್ಮವ || ೧ ||
ಅರ್ಥವ್ಯಾರಿಗೆ, ಪುತ್ರರಾರಿಗೆ|
ಮಿತ್ರ ಬಾಂಧವರ್ಯಾರಿಗೆ ||
ಕರ್ತೃ ಯಮನೊರು ಎಳೆದು ಒಯ್ವಾಗ|
ಅರ್ಥ ಪುತ್ರರು ಕಾಯ್ವರೆ || ೨ ||
ಅರ್ಥ ಪುತ್ರರು ಕಾಯ್ವರೆ || ೨ ||
ತಂದು ಬಂದರೆ ತನ್ನ ಪುರುಷಗೆ|
ಹಸಿದು ಬಳಲಿದಿ ಎಂಬಳು||
ಒಂದು ದಿವಸ ತಾರದಿದ್ದರೆ|
ಹಂದಿ ನಾಯಾಗಿ ಬೊಗಳ್ವಳು || ೩ ||
ಹಂದಿ ನಾಯಾಗಿ ಬೊಗಳ್ವಳು || ೩ ||
ಪ್ರಾಣದೊಲ್ಲಭೆ ತನ್ನ ಪುರುಷನ|
ಕಾಣದೆ ನಿಲ್ಲಲಾರಳು||
ಪ್ರಾಣ ಹೋಗಲು ಮುಟ್ಟಲಂಜ್ವಳು|
ಜಾಣೆ ಕರೆದರೂ ಬಾರಳು || ೪ ||
ಜಾಣೆ ಕರೆದರೂ ಬಾರಳು || ೪ ||
ಉಂಟು ಕಾಲಕೆ ನೆಂಟರಿಷ್ಟರು|
ಬಂಟರಾಗಿ ಕಾಯ್ವರು||
ಕಂಟಕರು ಯಮನೊರು ಬಂದು|
ಎಳೆವಾಗ ನೆಂಟರಿಷ್ಟರು ಬಾರರು || ೫ ||
ಎಳೆವಾಗ ನೆಂಟರಿಷ್ಟರು ಬಾರರು || ೫ ||
ಒಡವೆ ಆಶೆಗೆ ಒಡಲ ಕಿಚ್ಚಿಗೆ|
ಮಡದಿ ಬೆನ್ನಲಿ ಬಾಹೂಳು||
ಜಡಿದು ಯಮನೂರು ಎಳೆದು ಒಯ್ವಾಗ|
ಉಡುಗಿ ಬಿದ್ದಿತು ನಾಲಿಗೆ || ೬ ||
ಉಡುಗಿ ಬಿದ್ದಿತು ನಾಲಿಗೆ || ೬ ||
ದಿಟ್ಟತನದಲಿ ಪಟ್ಟವಾಳ್ದನ|
ಮೆಟ್ಟಿದೊಡಿದ ಪಾದವ||
ಮುಟ್ಟಿ ಭಜಿಸಿರೊ ದಿಟ್ಟ
ಪುರಂದರ ವಿಠಲೇಶನ ಪಾದವ || ೭ ||
ಪುರಂದರ ವಿಠಲೇಶನ ಪಾದವ || ೭ ||
***