Showing posts with label ಏನು ಪೇಳಲಿ ತೀರ್ಥಪತಿಯ ಮಹಿಮೆ vijaya vittala. Show all posts
Showing posts with label ಏನು ಪೇಳಲಿ ತೀರ್ಥಪತಿಯ ಮಹಿಮೆ vijaya vittala. Show all posts

Wednesday, 16 October 2019

ಏನು ಪೇಳಲಿ ತೀರ್ಥಪತಿಯ ಮಹಿಮೆ ankita vijaya vittala

ಏನು ಪೇಳಲಿ ತೀರ್ಥಪತಿಯ ಮಹಿಮೆ
ಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ ಪ

ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದು
ದೇಶದೊಳು ಪುಸಿಯಲ್ಲ ಸಿದ್ಧವೆನ್ನಿ
ಈಶನುಪದೇಶದಿಂದಲಿ ವಿಗತ ಜನನಾಗಿ
ಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ 1

ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿ
ಪರಮಭೀತಿಯಿಂದ ಅವಳ ವಸನವ ತಂದು
ವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು 2

ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲು
ನಿಲ್ಲದೆ ಸನ್ಮುಕ್ತಿ ಧರನಾಗುವಾ
ಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನ
ಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ 3
**********