Showing posts with label ನೋಡುವರೆ ನೀರದಶ್ಯಾಮಸುಂದರ ಮೂರ್ತಿ shreeda vittala ankita suladi ಸುಳಾದಿ. Show all posts
Showing posts with label ನೋಡುವರೆ ನೀರದಶ್ಯಾಮಸುಂದರ ಮೂರ್ತಿ shreeda vittala ankita suladi ಸುಳಾದಿ. Show all posts

Sunday, 1 August 2021

ನೋಡುವರೆ ನೀರದಶ್ಯಾಮಸುಂದರ ಮೂರ್ತಿ shreeda vittala ankita suladi ಸುಳಾದಿ

 ..

kruti by Srida Vittala Dasaru  Karjagi Dasappa

ಸುಳಾದಿ


ತಾಳ-ಝಂಪೆ

ನೋಡುವರೆ ನೀರದಶ್ಯಾಮಸುಂದರ ಮೂರ್ತಿ

ಪಾಡುವರ ಪರಮಪಾವನ್ನ ಕೀರ್ತಿ

ಕೂಡುವರೆ ಕೇವಲಾನಂದ ಚಿನ್ಮಯಗಾತ್ರ

ನೀಡುವರೆ ನಿಖಿಳಲೋಕೈಕಪಾತ್ರ

ನೋಡಿ ನಮಿಸುವರುಂಟು ಪಾಡಿಹಿಗ್ಗುವರೂಟ

ಕೂಡಿ ಸುಖಿಸುವರುಂಟು ನೀಡಿ ನಲಿವವರುಂಟು

ನೋಡಿಸುತ ಪಾಡಿಸುತ ಕೂಡಿಸುತ ಬೇಡಿಸುತ

ನಾಡದೈವಂಗಳ ಕೊಂಡಾಡಿಸದಲೆ

ಬೇಡಿದಿಷ್ಟವ ಕೊಡುತ ಶ್ರೀದವಿಠಲ ದಯ -

ಮಾಡಿ ನಮ್ಮನು ಪೊರೆವ ರೂಢಿಗೊಡೆಯ

ನಾಡದೈವಂಗಳ ಕೊಂಡಾಡಿಸದಲೆ 1


ತಾಳ-ಮಟ್ಟ

ಸಕಲ ಶ್ರುತಿನಿಕರಸಾರಹೋ

ಶುಕಮಹಾಮುನೀಂದ್ರ ಸನ್ನುತ

ಪ್ರಕಟ ಮಾಡಲ್ಯಾಕೆ ನಿನ್ನನು ಪರಮಪುರುಷ

ಪ್ರಕಟಮಾಡಲ್ಯಾಕೆ ನಿನ್ನನು

ಭಕ್ತವತ್ಸಲನೆಂಬೆನಲ್ಲದೆ

ಮುಕುತವಂದ್ಯ ಶ್ರೀದವಿಠಲ

ಯುಕುತಾಯುಕುತವೊಂದನರಿಯದೆ

ಪ್ರಕಟಮಾಡಲ್ಯಾಕೆ ನಿನ್ನನು 2


ತಾಳ-ತ್ರಿವಿಡಿ

ಆಯನುಭವ ಭಯ ಲಯವರ್ಜಿತ

ನಯನೋತ್ಸಹಕಾರಕ ತಾರಕ

ಜಯಮಂಗಳ ಮಂಗಳ ಮಂಗಳ

ಮಾಯಾ ಮಾಮರ ದೇವರಾÀಟ

ಸಯವೇ ಸೈ ಶ್ರೀದವಿಠಲ ನಿ

ನ್ನಯ ಚರಣಕೆ ನಮಿಸುವೆ ನಮಿಸುವೆ

ಜಯ ಮಂಗಳ ಮಂಗಳ ಮಂಗಳ

ಮಾಯಾ ಮಾಮರ ದೇವರಾಟ 3


ತಾಳ-ಅಟ

ಬಾರೋ ಬಾರೋ ಭವದೂರ ದೀನಜನ

ಭಾರ ನಿನ್ನದಯ್ಯಾ ಅಯ್ಯಯ್ಯಾ

ಸಾರಿದೆನೊ ನಾ ನಿನ್ನ ಸಾರಿದೆನೊ ನಿನ್ನ 4


ತಾಳ-ಆದಿ

ಶ್ರೀರಮಣ ಶ್ರೀದವಿಠಲ ಸಂ -

ಸಾರಕಂಜಿ ನಿಜ ಚಾರು ಚರಣಗಳ ಸಾರಿದೆನೊ ನಿನ್ನ

ಶಿರಿಗುರವಿತ್ತೆ ಪರಮನ ಪೆತ್ತೆ

ಗಿರಿಜೇಶಗೆ ನಿನ್ನ ಮೈ ಇತ್ತೆ

ಶರಣಾಗತವತ್ಸಲ ಕರುಣಾಕರ ಶ್ರೀದವಿಠಲ

ಸರಿಬಂದರೆ ಸಾಕುವದೆಮ್ಮನು

ಶರಣಾಗತವತ್ಸಲ 5


ಜತೆ

ಸೋಲು ಶ್ರೀದವಿಠಲ ಸೋಲು ಗೆಲುವು ನಿನ್ನ

ಪಾಲಿಗೆ ಬಂದಿರೆ ಪಾಲಿಸೆಮ್ಮನು ಬಿಡದೆ

***