..
ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ
ಮಂಗಳ ಚರಿತ ಕೃಪಾಂಗನೆ ಎನ್ನಂತ
ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ
ನತಜನ ಸುರಧೇನು ನೀನೆಂದು
ನುತಿಸಿ ವಂದಿಸುವೆನೋ
ರತಿಪತಿಪಿತ ನುತ ಕಥಾಮೃತ ಗ್ರಂಥದಿ
ಸತತ ಎನಗೆ ಮತಿ ಹಿತದಲಿ ಪ್ರೇರಿಸು 1
ಧನ್ಯನ ನೀಮಾಡೋ ಕರುಣದಿ
ಮನ್ನಿಸಿ ಕಾಪಾಡೋ
ಘನ್ನ ಮಹಿಮಕಿನ್ನು ನಿನ್ನ ಹೊರತು
ಇನ್ನಾರು ಕಾವರರಿಯೆ ಕಾಣೆ ಗುರೋ 2
ಮಂದಮತಿ ಬಿಡಿಸೋ ಈ
ಭವ ಬಂಧನ ಪರಿಹರಿಸೊ
ಇಂದಿರೆ ಪತಿ ಶಾಮಸುಂದರವಿಠಲ
ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ 3
***