ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆ
ಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ ||ಪ||
ಶಿವನ ರಾಣಿ ಎನ್ನ ಭುವನ ಮಧ್ಯದಲಿ
ಪವನ ಶಾಸ್ತ್ರವು ನಿತ್ಯ ಶ್ರವಣ ಮಾಡಿಸೆ ||೧||
ಹರನ ತೊಡೆಯೊಳು ಪೊಳೆವ ಸರಸಿಜಾಕ್ಷಿಯೆ
ಹರಿಯ ಬೋಧವ ಕೇಳಿ ಹಠವ ಗೆಲಿದೆಯೆ ||೨||
ಸರ್ವಮಂಗಳೆ ನಿನ್ನ ಶರಣು ಬಂದಿಹೆ ನಾನು
ಹರಿಯ ಗುಣಗಳ ವಾಣಿಯಲ್ಲಿರಿಸು ಕರುಣದಲಿ ||೩||
ಹರಿಯ ಶಾಸ್ತ್ರದ ಸ್ಮರಣೆ ಮನದಿ ನಿಲ್ಲಿಸು
ಮರುವು ಕೊಡದಲೆ ಹರಿಯ ಚರಣ ತೋರಿಸು ||೪||
ಬಂದ ಭಕ್ತರ ಬಿಡುವುದಿಂದುಚಿತವೆ
ಇಂದಿರೇಶನ ಮನದಿ ತಂದು ತೋರಿಸೆ ||೫||
***
pAhi pArvati ninna pAdava poMdihe
prEmadiMdali hariya pUje maaDise ||pa||
Sivana rANi enna bhuvana madhyadali
pavana shaastravu nitya shravaNa mADise ||1||
harana toDeyoLu poLeva sarasijAkShiye
hariya bOdhava kELi haThava gelideye ||2||
sarvamaMgaLe ninna SaraNu baMdihe naanu
hariya guNagaLa vANiyallirisu karuNadali ||3||
hariya SAstrada smaraNe manadi nillisu
maruvu koDadale hariya caraNa tOrisu ||4||
baMda Baktara biDuvudiMducitave
iMdirEshana manadi taMdu tOrise ||5||
***
ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ ಪ
ಶಿವನ ರಾಣಿ ಎನ್ನ ಭುವನ ಮಧ್ಯದಲಿಪವನ ಶಾಸ್ತ್ರವು ನಿತ್ಯ ಶ್ರವಣ ಮಾಡಿಸೆ 1
ಹರನ ತೊಡೆಯೊಳು ಪೊಳೆವ ಸರಸಿಜಾಕ್ಷಿಯೆಹರಿಯ ಬೋಧವ ಕೇಳಿ ಹಟವಗೆಲಿದೆಯೆ2
ಸರ್ವಮಂಗಳೆ ನಿನ್ನ ಶರಣು ಬಂದಿಹೆ ನಾನುಹರಿಯ ಗುಣಗಳ ವಾಣಿಯಲ್ಲಿರಿಸು ಕರುಣದಲಿ 3
ಹರಿಯ ಶಾಸ್ತ್ರದ ಸ್ಮರಣೆ ಮನದಿ ನಿಲ್ಲಿಸುಮರವು ಕೊಡದೆಲೆ ಹರಿಚರಣ ತೋರಿಸು 4
ಬಂದ ಭಕ್ತರ ಬಿಡುವುದಿಂದುಚಿತವೆಇಂದಿರೇಶನ ಮನದಿ ತಂದು ತೋರಿಸೆ 5
****