ಶ್ರೀ ಪುರಂದರದಾಸರ ಕೃತಿ
ರಾಗ ಶಹನ ಆದಿತಾಳ
ಕಂಡೆ ಕಂಡೆ ಕಂಡೆ ನಮ್ಮ । ಕಂಗಳ ಧೇನುವ ಕಂಡೆ ॥ ಪ ॥
ಮಂಗಳಮೂರುತಿ ಮನ್ನಾರ ಕೃಷ್ಣನ ॥ ಅ ಪ ॥
ಉಟ್ಟ ಪೀತಾಂಬರ ತೊಟ್ಟ ವಜ್ರಾಂಗಿಯ ।
ಪುಟ್ಟ ಪಾದದ ರತ್ನ ಮನ್ನಾರ ಕೃಷ್ಣನ ॥ 1 ॥
ಒರಳನೆಳೆವನ ಬೆರಳ ಚೀಪುವನ ।
ಧರೆಯೊಳು ಮೆರೆಯುವ ಮನ್ನಾರ ಕೃಷ್ಣನ ॥ 2 ॥
ಕರದ ಕಂಕಣ ಬೆರಳ ಮುದ್ರಿಕೆ ।
ತರಳ ಉಡುಪಿಯ ಮನ್ನಾರ ಕೃಷ್ಣನ ॥ 3 ।
ಅಲವಬೋಧರಿಗೆ ಒಲಿದು ಬಂದ ಮಹ ।
ಚೆಲುವ ಸ್ಮರನಪಿತ ಮನ್ನಾರ ಕೃಷ್ಣನ ॥ 4 ॥
ಶೇಷಶಯನನ ಭಾಸುರರೂಪನ ।
ಶ್ರೀಶ ಪುರಂದರವಿಠಲರಾಯನ ॥ 5 ॥
************
ಪುರಂದರದಾಸರು
ರಾಗ ಮಲಹರಿ ಏಕತಾಳ
ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ
ಮಂಗಳಮೂರುತಿ ಮನ್ನಾರ ಕೃಷ್ಣನ ಕಂಡೆ ಕಂಡೆ ಕಂಡೆ ||ಪ||
ಉಟ್ಟಪೀತಾಂಬರ ತೊಟ್ಟ ವಜ್ರಾಂಗಿಯ
ಪುಟ್ಟಪಾದದ ರನ್ನ ಮನ್ನಾರಕೃಷ್ಣನ ||
ಒರಳನೆಳೆವ ಬೆರಳ ಚೀಪುವನ
ಧರೆಯೊಳು ಮೆರೆಯುವ ಮನ್ನಾರಕೃಷ್ಣನ ||
ಕರದ ಕಂಕಣ ಬೆರಳ ಮುದ್ರಿಕೆ
ತರಳ ಉಡುಪಿಯ ಮನ್ನಾರಕೃಷ್ಣನ ||
ಅಲವಬೋಧರಿಗೆ ಒಲಿದು ಬಂದ ಮಹ-
ಚೆಲುವ ಸ್ಮರನಪಿತ ಮನ್ನಾರಕೃಷ್ಣನ ||
ಶೇಷಶಯನನ ಭಾಸುರರೂಪನ
ಶ್ರೀಶ ಪುರಂದರವಿಠಲರಾಯನ||
********
ಕಂಡೆ ಕಂಡೆ ಕಂಡೆನಯ್ಯಾ ಕಂಗಳ ದಣಿಯುವ
ತನಕಮಂಗಳ ಮೂರುತಿ ಮನ್ನಾರು ಕೃಷ್ಣನ ಪ
ಉಟ್ಟ ಪೀತಾಂಬರ ಕಂಡೆ ತೊಟ್ಟ ವಜ್ರದಂಗಿ ಕಂಡೆದಕ್ಷಿಣದ ದ್ವಾರಕಿ ಮನ್ನಾರು ಕೃಷ್ಣನ 1
ಕಡೆವ ಕಡೆಗೋಲ ಕಂಡೆ ನಡುವಿನೊಡ್ಯಾಣ ಕಂಡೆಕಡು ಮುದ್ದು ಮನ್ನಾರು ಕೃಷ್ಣನ ಕಂಡೆ 2
ದೇವಕಿ ದೇವಿಯರ ಕಂಡೆ ಗೋಪಿಯರ ಮುದ್ದಾಟ ಕಂಡೆಮಾವ ಕಂಸನ ಮರ್ದನ ಶ್ರೀ ಕೃಷ್ಣನ 3
ಆಕಳ ಕಾವುದ ಕಂಡೆ ಗೋಪಾಲಕೃಷ್ಣನ ಕಂಡೆವೈಕುಂಠವಾಸನ ಮನ್ನಾರು ಕೃಷ್ಣನ 4
ಶೇಷನ ಹಾಸಿಕೆಯ ಕಂಡೆ ಸಾಸಿರ ನಾಮನ ಕಂಡೆಶ್ರೀಶಪುರಂದರವಿಠಲ ಕೃಷ್ಣರಾಯನ5