Showing posts with label ಸಂತರೆ ಭವದೂರರು ಹಿತಕಾರ್ಯರು prasannavenkata. Show all posts
Showing posts with label ಸಂತರೆ ಭವದೂರರು ಹಿತಕಾರ್ಯರು prasannavenkata. Show all posts

Monday, 18 November 2019

ಸಂತರೆ ಭವದೂರರು ಹಿತಕಾರ್ಯರು ankita prasannavenkata

by ಪ್ರಸನ್ನವೆಂಕಟದಾಸರು
ಸಂತರೆ ಭವದೂರರು ಹಿತಕಾರ್ಯರು ಪ.

ಸಂತರ ಸೇವೆ ಶ್ರೀಹರಿ ಸೇವೆಸಂತರ ಮತವೆ ಹರಿಸಮ್ಮತವುಸಂತರ ಮತಿಯೆ ಮುಕುತಿಯ ಗತಿಯುಸಂತರಪಾದಚಿಂತನೆಗಾಹ್ಲಾದ1

ಸಂತರಗಾತ್ರಭುವನಪವಿತ್ರಸಂತರ ನೋಟ ಪಾಪಗಳೋಟಸಂತರ ವಚನ ಧರ್ಮವಿರಚನಸಂತರ ಸಂಗ ತೋಷತರಂಗ 2

ಸಂತರಿಂದೈಹಿಕಾಮುಷ್ಮಿಕ ಸೌಖ್ಯಸಂತರ ಅಭಯವಿರಲಾವಭವಸಂತರ ಕಂಡವ ನಿಜ ಸುಖ ಕಂಡಸಂತ ವಿಯೋಗ ತಮಸಿನಭೋಗ3

ಸಂತರಖೇದವಂಶ ವಿಚ್ಛೇದಸಂತರ ಪ್ರೀತಿ ಶುಭಪದಪ್ರಾಪ್ತಿಸಂತರ ವಾರ್ತಾಖಿಳ ಪುರುಷಾರ್ಥಸಂತರ ಮಹಿಮಿ ಹೊಗಳ್ವಾತ ಪ್ರೇಮಿ 4

ಸಂತರ ಊರೆ ಎನ್ನ ತವರೂರುಸಂತರ ಗತಿಗೋತ್ರರು ಎನಗಾಗಿಸಂತರ ಪದವನಪ್ಪಿದರೊಲಿವಸಂತರಿಗರಸ ಪ್ರಸನ್ವೆಂಕಟೇಶ 5
*******