ankita ಶ್ರೀಕರವಿಠಲ
ರಾಗ: ಕಾಂಬೋಜಿ ತಾಳ: ಝಂಪೆ
ಈ ಪರಿಯಸೊಬಗಾವಯತಿಗಾದರುಂಟೆ
ತಾಪಸೋತ್ತಮ ರಾಘವೇಂದ್ರ ಮುನಿಗಲ್ಲದೆ ಪ
ಖುಲ್ಲ ನಿನ್ನಯ ಹರಿಯು ಎಲ್ಲಿಹನು ತೋರೆನಲು
ಬಲ್ಲಿದನು ಸ್ತಂಭದೊಳಗಲ್ಲೆ ತೊರಿದ
ಜಲಜಸಂಭವ ಪ್ರಮುಖರೆಲ್ಲ ತುತಿಸಲು ಸಿರಿಯ-
ನಲ್ಲನೊಲಿಮೆಯ ಪ್ರಹ್ಲಾದಗಲ್ಲದೆ 1
ಭೂಪ ಕುಂತಿಜನಿಂದ ತಾ ಪಡೆದು ಘನವರವ
ಗೋಪಿಕಂದನ ಒಲಿಸಿ ಬಲುತುತಿಸಿದ
ಶ್ರೀಪುರಂದರದಾಸರಾಪೇಕ್ಷ ಸಲ್ಲಿಸಿದ
ತಾಪಸೋತ್ತಮಜನರ ತಾ ಪುನೀತರಗೈದ 2
ತಂದೆ ಶ್ರೀಕರವಿಠಲನಿಂದಾಜ್ಷೆ ಕೈಗೊಳುತ
ಚೆಂದದಿಂದಲಿ ವರಮಂತ್ರಮಂದಿರದಿ ನಿಂದು
ಒಂದಾರುಶತವರುಷ ವಂಧ್ಯಾಂಧಕರಿಗೆಲ್ಲ
ಕಂದರಕ್ಷಿಗಳಿತ್ತು ಕುಂದಿಲ್ಲದಲೆ ಪೊರೆವ 3
***