ರಾಗ ಶಂಕರಾಭರಣ ಝಂಪೆತಾಳ
ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ ತನ್ನ
ವಂಚನೆಯಿಂದಲಿ ತನಗೆ ತಾನೆ ಕೆಟ್ಟುಹೋಹನಲ್ಲದೆ ||ಪ ||
ಊರೆಲ್ಲ ತೊಳೆದರೆ ಮಸಿ ಬೆಳ್ಳಗಾಗುವುದೆ
ನೀರೊಳಗಿನ ಕಲ್ಲು ಮೃದುವಾಗಬಲ್ಲುದೆ
ಧಾರಿಣಿಯೊಳಗೊಬ್ಬ ಮೂರ್ಖನಿಗೆ ಬುದ್ಧಿಯನು
ಆರಾರು ಪೇಳಿದರೆ ಅವ ಕೇಳಬಲ್ಲನೆ ||
ಹಾವಿನ ಮರಿಯ ತಂದು ಹಾಲನೆರೆದು ಸಾಕಿದರೆ
ಬಾಯಿಯೊಳಗಿನ ವಿಷವು ತಾ ಮಾಣಬಲ್ಲುದೆ
ನಾಯಿಕುನ್ನಿಯ ತಂದು ಜ್ಞಾನವನು ಹೇಳಿದರೆ
ಕಾಲು ಕಚ್ಚುವ ವಿದ್ಯವ ಬಿಡಬಲ್ಲುದೆ ||
ಕತ್ತೆಮರಿಯನೆ ತಂದು ಗಾನವನ್ನೆ ಹೇಳಿದರೆ
ವಿಸ್ತರಿಸಲದು ಮತ್ತೆ ಕೇಳುವರ ಬಲ್ಲುದೆ
ಹಿತ್ತಲ ತುರುಚಿಯ ತಂದು ಪನ್ನೀರನೆರೆದರೆ
ಒತ್ತಿದವರ ಹರಿಕೊಂಡು ತಿಂಬೋದು ಬಿಡಬಲ್ಲುದೆ ||
ಹಂದಿಯ ಮರಿಗೆ ಶ್ರೀಗಂಧವ ಪೂಸಿದರೆ
ಸಂದುಗೊಂದಿನ ಬಯಕೆ ಬಿಡಬಲ್ಲುದೆ
ಮಂದವಾಗಿಹ ಗಜವ ತಂದು ಬುದ್ಧಿಯ ಹೇಳೆ
ಎಂದಿಗಾದರು ಜಾಗ್ರತೆಯು ಪುಟ್ಟಬಲ್ಲುದೆ ||
ಹುಟ್ಟು ಕುರುಡನ ಕೈಯ ಕನ್ನಡಿಯ ಕೊಟ್ಟರೆ
ಮುಟ್ಟಿ ತನ್ನಂಗವನು ನೋಡಿಕೊಳ್ಳಬಲ್ಲನೆ
ಸೃಷ್ಟಿಯೊಳು ಪುರಂದರವಿಠಲನ ದಾಸರ
ಕಷ್ಟಪಡಿಸಿದವರು ಕೆಟ್ಟುಹೋಹರಲ್ಲದೆ ||
***
ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ ತನ್ನ
ವಂಚನೆಯಿಂದಲಿ ತನಗೆ ತಾನೆ ಕೆಟ್ಟುಹೋಹನಲ್ಲದೆ ||ಪ ||
ಊರೆಲ್ಲ ತೊಳೆದರೆ ಮಸಿ ಬೆಳ್ಳಗಾಗುವುದೆ
ನೀರೊಳಗಿನ ಕಲ್ಲು ಮೃದುವಾಗಬಲ್ಲುದೆ
ಧಾರಿಣಿಯೊಳಗೊಬ್ಬ ಮೂರ್ಖನಿಗೆ ಬುದ್ಧಿಯನು
ಆರಾರು ಪೇಳಿದರೆ ಅವ ಕೇಳಬಲ್ಲನೆ ||
ಹಾವಿನ ಮರಿಯ ತಂದು ಹಾಲನೆರೆದು ಸಾಕಿದರೆ
ಬಾಯಿಯೊಳಗಿನ ವಿಷವು ತಾ ಮಾಣಬಲ್ಲುದೆ
ನಾಯಿಕುನ್ನಿಯ ತಂದು ಜ್ಞಾನವನು ಹೇಳಿದರೆ
ಕಾಲು ಕಚ್ಚುವ ವಿದ್ಯವ ಬಿಡಬಲ್ಲುದೆ ||
ಕತ್ತೆಮರಿಯನೆ ತಂದು ಗಾನವನ್ನೆ ಹೇಳಿದರೆ
ವಿಸ್ತರಿಸಲದು ಮತ್ತೆ ಕೇಳುವರ ಬಲ್ಲುದೆ
ಹಿತ್ತಲ ತುರುಚಿಯ ತಂದು ಪನ್ನೀರನೆರೆದರೆ
ಒತ್ತಿದವರ ಹರಿಕೊಂಡು ತಿಂಬೋದು ಬಿಡಬಲ್ಲುದೆ ||
ಹಂದಿಯ ಮರಿಗೆ ಶ್ರೀಗಂಧವ ಪೂಸಿದರೆ
ಸಂದುಗೊಂದಿನ ಬಯಕೆ ಬಿಡಬಲ್ಲುದೆ
ಮಂದವಾಗಿಹ ಗಜವ ತಂದು ಬುದ್ಧಿಯ ಹೇಳೆ
ಎಂದಿಗಾದರು ಜಾಗ್ರತೆಯು ಪುಟ್ಟಬಲ್ಲುದೆ ||
ಹುಟ್ಟು ಕುರುಡನ ಕೈಯ ಕನ್ನಡಿಯ ಕೊಟ್ಟರೆ
ಮುಟ್ಟಿ ತನ್ನಂಗವನು ನೋಡಿಕೊಳ್ಳಬಲ್ಲನೆ
ಸೃಷ್ಟಿಯೊಳು ಪುರಂದರವಿಠಲನ ದಾಸರ
ಕಷ್ಟಪಡಿಸಿದವರು ಕೆಟ್ಟುಹೋಹರಲ್ಲದೆ ||
***
pallavi
panca mahApAdakige endu buddhiya pELe tanna vancaneyindali tanake tAne keTTuhOhanallade
caraNam 1
Urella toLedare masi beLLagAguvude nIroLagina kallu mrduvAga ballude
dhAriNiyoLagobba mUrkhanige buddhiyanu ArAru pELidare ava kELa ballane
caraNam 2
hAvina mariya tandu hAlaneredu sAgidare bAyiyoLagina viSavu tA mANa ballude
nAyikunniya tandu jnAnavanu hELidare kAlu kaccuva vidyava biDa ballude
caraNam 3
katte mariyane tandu kAvavanne hELidare vistarisaladu matte kELuvare ballude
hittala turuciya tandu pannIraneredare ottidavara harikoNDu timbOdu biDa ballude
caraNam 4
handiya marige shrIgandhava pUsidare sandukondina bayagebiDaballude
mandavAgiha gajava tandu buddhiya hELe endigAdaru jAgrateyu puTTa ballude
caraNam 5
huTTu kuruDana kaiya kannDiya koTTare muTTi tannangavanu nODikoLLa ballane
shrSTiyoLu purandara viTTalana dAsara kaSTapaDisidavaru keTTuhOharallade
***