Showing posts with label ರಾಘವೇಂದ್ರರ ನೋಡುಣು ನಡಿ ನಡಿ sirinarayana. Show all posts
Showing posts with label ರಾಘವೇಂದ್ರರ ನೋಡುಣು ನಡಿ ನಡಿ sirinarayana. Show all posts

Monday 6 September 2021

ರಾಘವೇಂದ್ರರ ನೋಡುಣು ನಡಿ ನಡಿ ankita sirinarayana

 ankita ಸಿರಿನಾರಾಯಣ

ರಾಗ: ಜಂಜೂಟಿ  ತಾಳ: ಕೇರವ


ರಾಘವೇಂದ್ರರ ನೋಡುಣು ನಡಿ ನಡಿ

ಬಾಗಿ ವಂದಿಸಿ ಭಕ್ತಿ ಪಡಿ ಪಡಿ 


ಯೋಗಿವರನ ನಾಮ ನುಡಿ ನುಡಿ ಭವ

ರೋಗಹರನ ಧ್ಯಾನ ಮಡಿ ಮಡಿ  ಅ. ಪ


ಪರಮೇಷ್ಠಿಯ ಸೇವಕ ಶಂಕುಕರ್ಣನು

ಹರಿಪೂಜೆಗೆ ಹೂವ ತರೆ ತರೆ

ಸರಿ ವೇಳೆಗೆ ಬರದಲೆ ಶಾಪದಿ ದೈತ್ಯ

ಹಿರಣ್ಯಕ ಸುತನೆಂದು ಕರೆ ಕರೆ  1

ತರಳ ಪ್ರಹ್ಲಾದಗೆ ದುರುಳ ಪಿತನು ಬಾಧೆ

ಪರಿ ಪರಿ ವಿಧದಲಿ ಕೊಡೆ ಕೊಡೆ

ಹರಿ ಸರ್ವತ್ರದಲಿ ಇರುವನೆಂಬುದು ಸತ್ಯ

ಭರದಿ ತೋರಿದ ಕಂಬ ವಡೆ ವಡೆ  2

ದ್ವಾಪರದಲಿ ಬಾಹ್ಲೀಕ ರಾಜರು

ಪಾಪಿ ಕೌರವ ಪಕ್ಷದಿರೆ ಇರೆ

ಭಾಪು ಭೀಮನಿಂ ಮರಣ ಪ್ರಾರ್ಥಿಸುತ

ಶ್ರೀಪತಿ ಚರಣವ ಬೆರೆ ಬೆರೆ  3

ಯತಿ ವ್ಯಾಸರಾಯರು ಪ್ರತಿದಿನ ಪ್ರಾಣರ

ಸತತ ಸ್ಥಾಪಿಸಿ ಬಹು ಮೆರೆ ಮೆರೆ

ರತಿಪತಿ ಪಿತನ ಪ್ರತಿಮೆ ಕುಣಿಸುತಲಿ

ಶೃತಿ ಚಂದ್ರಿಕೆಗಳನು ಬರೆ ಬರೆ  4

ಗುರು ರಾಘವೇಂದ್ರರು ವರ ಮಂತ್ರಾಲಯದಿ

ಸುರಧೇನು ತರುವೆಂದು ಕರೆ ಕರೆ

ಸಿರಿನಾರಾಯಣ ವಾಯು ಸುರರಿಗ್ವಾಸನಾಗಿ

ಸ್ಮರಿಪ ಸದ್ಭಕ್ತರ ಧೊರೆ ಧೊರೆ  5

***