Showing posts with label ಶುಕಪಿತನ ಪದಕಂಜ ಪದುಪಾ ಅಖಿಳ ಲೋಕದ ಗುರುವೆ vijaya vittala madhwacharya stutih. Show all posts
Showing posts with label ಶುಕಪಿತನ ಪದಕಂಜ ಪದುಪಾ ಅಖಿಳ ಲೋಕದ ಗುರುವೆ vijaya vittala madhwacharya stutih. Show all posts

Friday, 27 December 2019

ಶುಕಪಿತನ ಪದಕಂಜ ಪದುಪಾ ಅಖಿಳ ಲೋಕದ ಗುರುವೆ ankita vijaya vittala madhwacharya stutih

ವಿಜಯದಾಸ
ಶುಕಪಿತನ ಪದಕಂಜ ಪದುಪಾ |
ಅಖಿಳ ಲೋಕದ ಗುರುವೆ ಸುಖ ತೀರ್ಥ ಮುನಿಪಾ ಪ

ನಿತ್ಯ ನೈಮಿತ್ಯಗಳು |
ಗತಿ ತಪ್ಪಿ ಪೋಗಿರಲು ಸರ್ವ ದೇವತೆಗಳು ||
ಪಥವ ಕಾಣದೆ ನೆರೆದು ಯೋಚಿಸಿ ತಮ್ಮೊಳು |
ಅತಿಶಯದಿ ವೊದರಿ ಕೇಳು ಭವನದಾ |
ಪತಿಯಾದ ಬೊಮ್ಮಗುಸರಿದರಂದು ಮೇಲು1

ತುತಿಸಲಾಕ್ಷಣ ಕೇಳಿ ಅಜನು ಶಿರದೂಗಿದನು |
ಕೃತಭುಜರ ಸಹವಾಗಿ ಹರಿಪುರಕೆ ಸಾಗಿದನು |
ನತನಾಗಿ ಶಿರಿಪತಿಯ ಪದಯುಗಕೆ ಬಾಗಿದನು |
ಗತಿ ನೀನೆ ಎಂದು ಕೂಗಿದನು ಹರಿ ಕೇಳಿ |
ಸತತ ನಿನ್ನನ್ನು ಕರೆದು ಪೇಳಿದವೇಗಿದನು 2
ಭೂಸುರನ ಗರ್ಭದಲಿ ಬಂದೆ ನೀನವತರಿಸಿ |
ವಾಸುದೇವನೆಂಬ ನಾಮದಿಂದಲಿ ಜನಿಸೀ |
ಭಾಸುರ ಕೀರ್ತಿಯಲಿ ಮೆರೆÀದೆ ಬಲು ಪಸರಿಸಿ |
ದೋಷ ವರ್ಜಿತದ ಗುಣರಾಸಿ ಎನಿಸುವಾ |
ಲೇಸು ಆರೈದೆರಡು ಲಕ್ಷಣ ಸಂನ್ಯಾಸಿ 3

ಪುಟ್ಟಿ ಇಳಿಯೊಳಗೆ ಸಂಕರನೆಂಬ ದುರವಾದಿ |
ಜಟ್ಟಿಗನಾಗಿ ಸೋsಹಂ ಯೆಂಬ ಅತಿ ಕ್ರೋಧಿ |
ಅಟ್ಟಹಾಸದಲಿ ತಿರುಗಿದನು ಬೀದಿ ಬೀದಿ |
ಘಟ್ಟವಚನದಿಂದ ಕಾದಿ ಅವನ ಮುರಿ |
ದೊಟ್ಟಿದೇ ವಪ್ಪದಲಿ ಮಾಯಿ ಮತಭೇದಿ 4

ಅಮೃತ |
ಗ್ರಂಥ ಉತ್ತಮರಿಗೆರೆದು ಸುಖ ಬಡಿಸಿದೆ ಅತಿಶ್ಯಾಂತ |
ಅತ್ಯಂತ ಮಹಿಮ ಬಲವಂತ ನಿಮಗೆ ನಾ |
ಎತ್ತಿ ಕರಗಳ ಮುಗಿವೆ ತೋರು ನಿಜ ಪಂಥ 5

ಹರಿಯೆ ಪರನೆಂದು ಬೊಬ್ಬರಿದು ಎಳಹರಿ |
ಮರಿಯೆ ಬಿರಿದು ಡಂಗುರವ ಹೊಯಿಸಿ |
ಚರಿಸಿದ ಗುರು ದೊರೆಯೇ |
ಸರಿಗಾಣೆ ನಿನಗೆಲ್ಲಿ ಮತ್ತೊಬ್ಬರನ ಕರಿಯೇ |
ವರ ಬದರಿಲಿಪ್ಪ ವೈರಾಗ್ಯದ ಸಿರಿಯೇ 6

ಮುನಿಗಳೊಳಗೆ ರನ್ನ ಮುನಿದವರಿಗಿರಬೆನ್ನ |
ಘನ ವಿದ್ಯಸಂಪನ್ನ ಗುಣದಲ್ಲಿ ಅಚ್ಛಿನ್ನ |
ನೆನೆದವರ ಪ್ರಸನ್ನ ತನುವೆ ತಪುತ ಚಿನ್ನ |
ಮಿನಗುವಂತೆಯಿಪ್ಪ ಪಾವನ್ನ ಮಧ್ವಮುನಿ |
ಚಿನುಮಯ ವಿಜಯವಿಠ್ಠಲನ್ನ ಪ್ರಸನ್ನಾ7
*********