Showing posts with label ಏನು ಕಾರಣ ಮತಿಯಿಲ್ಲ ಮನವೆ vijaya vittala. Show all posts
Showing posts with label ಏನು ಕಾರಣ ಮತಿಯಿಲ್ಲ ಮನವೆ vijaya vittala. Show all posts

Wednesday, 16 October 2019

ಏನು ಕಾರಣ ಮತಿಯಿಲ್ಲ ಮನವೆ ankita vijaya vittala

ಏನು ಕಾರಣ ಮತಿಯಿಲ್ಲ ಮನವೆ ಪ

ಹೀನಾಯವಾಡದಿರು ಪರರ ಗುಣಗಳ ಎಣಿಸಿ ಅ.ಪ

ಅವನ ಗೊಡವೆಯೇಕೆ ಅವನಾರು ನೀನಾರು |
ಅವನ ಪಾಪಕ್ಕೆ ನೀ ಭಾಗಾದಿಯೆ |
ಅವನುತ್ತಮನಾದಡವನೆ ಬದುಕಿದ ಕಾಣೊ
ಅವ ಪುಣ್ಯಮಾಡಿದರೆ ಅವನ ಕುಲ ಉದ್ಧಾರ 1
ನಿನಗೆ ಕೊಡುವುದರೊಳಗೆ ಬೇಡ ಬಂದವನಲ್ಲ |
ನಿನಗೆ ಅವನಿಗೆ ಏನು ಸಂಬಂಧವೊ |
ಮನೆ ಒಡವೆ ವಸ್ತುಗಳ ಹಂಚಿಕೊಂಬುವುದಲ್ಲ |
ಕ್ಷಣ ಕ್ಷಣಕೆ ಕ್ಲೇಶವನು ಮಾಡಿಕೊಂಬುದು ಸಲ್ಲ 2
ನಿನ್ನ ಗತಿ ಮಾರ್ಗಕ್ಕೆ ಅವನಡ್ಡ ಬಾಹನೆ |
ನಿನ್ನಿಂದ ಪರಲೋಕ ಅವನಿಗುಂಟೆ |
ನಿನ್ನೊಳಗೆ ನೀ ತಿಳಿದು ವಿಜಯವಿಠ್ಠಲನ್ನ |
ಸನ್ನುತಿಸಿ ಭವರೋಗ ಬನ್ನವನು ಕಳೆಯೊ 3
***********