Showing posts with label ಹಬ್ಬಂಗಳಿವೆ ಕೇಳಿ ಊರ್ಬಿ vijaya vittala ankita suladi ಹಬ್ಬ ಸುಳಾದಿ HABBANGALIVE KELI OORBI HABBA SULADI. Show all posts
Showing posts with label ಹಬ್ಬಂಗಳಿವೆ ಕೇಳಿ ಊರ್ಬಿ vijaya vittala ankita suladi ಹಬ್ಬ ಸುಳಾದಿ HABBANGALIVE KELI OORBI HABBA SULADI. Show all posts

Sunday, 8 December 2019

ಹಬ್ಬಂಗಳಿವೆ ಕೇಳಿ ಊರ್ಬಿ vijaya vittala ankita suladi ಹಬ್ಬ ಸುಳಾದಿ HABBANGALIVE KELI OORBI HABBA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

ಹಬ್ಬ ಸುಳಾದಿ 

[ ನೀಚ ಗುಣಗಳನ್ನು ಬಿಟ್ಟು , ಉತ್ತಮ ಗುಣಗಳನ್ನು ಸ್ವೀಕರಿಸುವ ಉತ್ತುಮ ವರ್ತನವೇ ಹಬ್ಬ , ಮಂಗಳಕರವಾದ ಹರಿಭಕುತಿ (ವೈರಾಗ್ಯ) ]

 ರಾಗ ಪೂರ್ವಿಕಲ್ಯಾಣಿ 

 ಧ್ರುವತಾಳ 

ಹಬ್ಬಂಗಳಿವೆ ಕೇಳಿ ಊರ್ಬಿಯೊಳಗೆ ವೈ -
ದರ್ಭಿರಮಣ ಕರುಣಾಬ್ಧಿ ವೊಲಿದ ಬಳಿಕ
ಒಬ್ಬರ ಕಾಡಿಬೇಡಿ ಅಬ್ಬರದ ಹಬ್ಬ ಮಾಡಿದ್ದರಿಂದ
ಉಬ್ಬುತೀರದು ಕಾಣೊ ಆರ್ಬುದ ಜನನಕ್ಕೆ
ಅಬ್ಬಿದಾವರ್ತಿ ಧಾನ್ಯ ರುಬ್ಬಿ ಗಂಜಿಯ ಕಾಸಿ
ಹಬ್ಬಿದ ಸುಖಮಾನ ವಬ್ಬಿಗೆ ಸತಿಪತಿ
ಇಬ್ಬರಾನಂದದಲ್ಲಿ ಹೆಬ್ಬಟ್ಟಿನಲ್ಲಿ ಸವಿದು
ಸಭ್ಯವಾಗಿಪ್ಪದು ಹಬ್ಬವೆ ಬಲು ಹಬ್ಬ
ನಿರ್ಭಯವಾದ ರತ್ನಗರ್ಭದಲ್ಲಿ ಕುಟೀರ
ಗುಬ್ಬಿಗೂಡಿನಷ್ಟು ಗರ್ಭವಾಸವೆ ರಚಿಸಿ
ಹಬ್ಬಿಗಿಕ್ಕದೆ ಏನು ನಿರ್ಬಂಧನವಿಲ್ಲದೆ
ಲಭ್ಯವಾಗಿಪ್ಪ ಗರ್ಭದ ಸುಖಿಗಳವರು
ಕರ್ಬುರನಂತೆ ತಿಂದು ಕೊಬ್ಬಿ ತಿರುಗುವಂಗೆ
ದುರ್ಭಾಗ್ಯವಲ್ಲದೆ ಹಬ್ಬವೆನಿಸುವದೆ
ಕಬ್ಬು ಬಿಲ್ಲಿನಯ್ಯ ವಿಜಯವಿಟ್ಠಲರೇಯ 
ದರ್ಭೆ ಏರಿಸಲು ಹಿಬ್ಬರ ಕರವ ವಿಡಿವಾ ॥ 1 ॥

 ಮಟ್ಟತಾಳ 

ಕಾಮಕ್ರೋಧಂಗಳು ಬಿಡುವದೇ ಬಲು ಹಬ್ಬ
ನೇಮ ನಿತ್ಯವನ್ನೆ ಮಾಡುವದೇ ಹಬ್ಬ
ತಾಮಸ ಜನರುಗಳ ಬಿಡುವದೇ ಮಹಾ ಹಬ್ಬ
ಕಾಮನ ಉಪಹತಿಗೆ ಅಂಜುವದೇ ಹಬ್ಬ
ಭೂಮಿಯೊಳಗೆ ಜ್ಞಾನಿಯಾಗುವದೇ ಹಬ್ಬ
ಸ್ವಾಮಿ ಭೃತ್ಯನ್ಯಾಯ ತಿಳಿಯುವದೇ ಮಹಾ ಹಬ್ಬ
ಶ್ರೀ ಮಾರುತಿ ಮತವ ಹಾರೈಪದೇ ಹಬ್ಬ
ಯಾಮಯಾಮಕ್ಕೆ ಹರಿಯನಾಮ ನೆನೆವದೆ ಹಬ್ಬ
ಯ್ಯೋಮ ಗಂಗೆಯ ಜನಕ ವಿಜಯವಿಟ್ಠಲ ಹರಿಯ
ಧಾಮವ ಬಯಸುವದೇ ಧರೆಯೊಳು ಮಹ ಹಬ್ಬ ॥ 2 ॥

 ತ್ರಿವಿಡಿತಾಳ 

ಬಂದ ದುರಿತಗಳ ಪೋಗಾಡುವದೇ ಹಬ್ಬ
ಮಂದಾಕಿನಿಯಲ್ಲಿ ಮಜ್ಜನವೇ ಹಬ್ಬ
ನಿಂದ್ಯಕಾರರ ನಿತ್ಯ ನಿಂದೆ ಮಾಳ್ಪುದೆ ಹಬ್ಬ
ವಂದಿಸಿ ಗುರುಗಳಿಗೆ ಎರಗುವದೆ ಹಬ್ಬ
ಮುಂದೆ ಪುಟ್ಟುವ ಜನನ ನೀಗಿಕೊಂಬುದೆ ಹಬ್ಬ
ಬಂಧನವಾಗದ ಯೋಚನೆ ಬಲು ಹಬ್ಬ
ತಂದೆ ತಾಯಿಗಳಿಗೆ ಅನುಕೂಲವೇ ಹಬ್ಬ
ಅಂದರೆ ನಗುತ ಸಂತೋಷವಾಹದೇ ಹಬ್ಬ
ಕುಂದು ಸಜ್ಜನರಿಗೆ ನುಡಿಯದಿಪ್ಪದೇ ಹಬ್ಬ
ಬಿಂದು ಮಾತುರ ಭೋಗ ಬಯಸದಿಪ್ಪದೇ ಹಬ್ಬ
ಬಂದ ಅತಿಥಿಗಳ ಪೂಜಿಸುವದೇ ಹಬ್ಬ
ಮಂದಿರದಲ್ಲಿ ಕಲಹವಿಲ್ಲದ್ದೆ ಮಹಾ ಹಬ್ಬ
ಇಂದು ನಾಳಿಗೆ ಎಂಬೊ ಚಿಂತೆ ಬಿಡುವದೇ ಹಬ್ಬ
ಸಂದಣೆ ತೊರೆದು ಏಕಾಂತವಾಹದೆ ಹಬ್ಬ
ನಿಂದಿದ್ದ ಖಳರೊಳು ನೆರೆಯದಿಪ್ಪದೇ ಹಬ್ಬ
ನಿಂದೆ ಬಾರದಂತೆ ಬಾಳುವದೇ ಹಬ್ಬ
ಇಂದ್ವರ್ಕವುಳ್ಳನಕ ವಿಜಯವಿಟ್ಠಲರೇಯನ 
ಒಂದೆ ಭಕುತಿಯಲಿ ಭಜಿಪುದೆ ಮಹಾ ಹಬ್ಬ ॥ 3 ॥

 ಅಟ್ಟತಾಳ 

ಋಣರೂಪವಾಗದ ಸಂಸಾರವೇ ಹಬ್ಬ
ಗುಣವಂತನಾಗಿ ಸಂಚರಿಸುವುದೇ ಹಬ್ಬ
ಕನಸೀಲಿ ಹಣವನ್ನು ಬಯಸದಿಪ್ಪದೇ ಹಬ್ಬ
ಮನ ವಾಚ ಕಾಯಕ ಬಡತನವೇ ಹಬ್ಬ
ವನಜನಾಭನ ನೋಡಿ ಪಾಡುವದೇ ಹಬ್ಬ
ದಿನ ಪ್ರತಿದಿನ ಸತ್ಕರ್ಮಾಚರಣೆ ಹಬ್ಬ
ಮಣಿಕರ್ಣಿಕೆಯಲ್ಲಿ ದೇಹತ್ಯಾಗವೇ ಹಬ್ಬ
ಮನೆ ನೆರೆ ಹೊರೆ ನೋಡಿ ಬಳಲದಿಪ್ಪುದೆ ಹಬ್ಬ
ಅನಿಮಿಷ ಜಾಗರ ಹರಿವಾಸರವೇ ಹಬ್ಬ
ತನುವಿಗೆ ವ್ಯಾಧೆ ಬಾರದ್ದೊಂದೆ ಮಹಾ ಹಬ್ಬ
ಚಿನುಮಯ ಮೂರುತಿ ವಿಜಯವಿಟ್ಠಲರೇಯನ 
ಮನಸಿನೊಳನುದಿನ ಈಕ್ಷಿಸುವದೇ ಹಬ್ಬ ॥ 4 ॥

 ಆದಿತಾಳ 

ಕಾಲನ ಭಾದಿಗೆ ಸಿಲುಕದಿಪ್ಪದೆ ಹಬ್ಬ
ಕಾಲಕಾಲಕೆ ತೀರ್ಥಯಾತ್ರೆ ಮಾಳ್ಪದೆ ಹಬ್ಬ
ಕೇಳುವ ಹರಿಕಥಾ ಶ್ರವಣವೆ ದೊಡ್ಡ ಹಬ್ಬ
ನಾಲಿಗಿಂದಲಿ ಹರಿಯ ಸ್ತೋತ್ರ ಮಾಳ್ಪದೆ ಹಬ್ಬ
ಆಳಾಗಿ ಒಬ್ಬನಲ್ಲಿ ವಶವಾಗದ್ದೊಂದೆ ಹಬ್ಬ
ಹಾಳು ಹರಟೆ ಬಿಟ್ಟು ಹೊತ್ತು ಗಳಿಯುವದೇ ಹಬ್ಬ
ಶ್ರೀಲೋಲ ಪರನೆಂದು ಕೂಗ್ಯಾಡುವದೇ ಹಬ್ಬ
ವಾಲಯ ಗಯಾದಲ್ಲಿ ಕುಲಪವಿತ್ರವೇ ಹಬ್ಬ
ಭಾಳಲಿಪಿಗೆ ನೋಯ ಆಡದಿಪ್ಪದೇ ಹಬ್ಬ
ವೇಳ್ಯಗೆ ದೊರೆತದ್ದು ಭುಂಜಿಸುವದೇ ಹಬ್ಬ
ಕೀಳುನುಡಿಯ ಬಿಟ್ಟುಕೊಡುವದೇ ಹಬ್ಬ
ತೋಳಲಿ ಭಾಗವತರ ಬಿಗಿದಪ್ಪುವದೇ ಹಬ್ಬ
ಪಾಲಾಬ್ಧಿಶಾಯಿ ನಮ್ಮ ವಿಜಯವಿಟ್ಠಲರೇಯನ 
ಊಳಿಗದವನಾಗಿ ವಾಲ್ಗೈಸುವದೇ ಹಬ್ಬ ॥ 5 ॥

 ಜತೆ 

ದಂಪತಿಗಳು ಏಕವಾಗಿಪ್ಪುದೇ ಹಬ್ಬ 
ಶಂಪದಂತೆ ವಿಜಯವಿಟ್ಠಲ ಪೊಳೆವದೇ ಹಬ್ಬ ॥
*********

ಹಬ್ಬ ಸುಳಾದಿ

ಧ್ರುವತಾಳ

ಹಬ್ಬಂಗಳಿವೆ ಕೇಳಿ ಊರ್ಬಿಯೊಳಗೆ ವೈ
ದರ್ಭರಮಣ ಕರುಣಾಬ್ಧಿ ಒಲಿದ ಬಳಿಕ
ಒಬ್ಬರ ಕಾಡಿಬೇಡಿ ಒಬ್ಬರ ಹಬ್ಬ ಮಾಡಿದರಿಂದ
ಉಬ್ಬುತೀರದು ಕಾಣೋ ಆರ್ಬುದ ಜನಕ್ಕೆ
ಅಬ್ಬಿದಾವರ್ತಿ ಧಾನ್ಯರುಬ್ಬಿಗಂಜಿಯ ಕಾಸಿ
ಹಬ್ಬಿದ ಸುಖಮಾನ ವಬ್ಬಿಗೆ ಸತಿಪತಿ
ಇಬ್ಬರಾನಂದಲ್ಲಿ ಹೆಬ್ಬಟ್ಟಿನಲ್ಲಿ ಸವಿದು
ಸಭ್ಯವಾಗಿಪ್ಪುದು ಹಬ್ಬವೆ ಬಲಹಬ್ಬ
ನಿರ್ಭಯವಾದ ರತ್ನಗರ್ಭದಲ್ಲಿ ಕುಟೀರ
ಗುಬ್ಬಿಗೂಡಿನಷ್ಟು ಗರ್ಭವಾಸವೆ ರಚಿಸಿ
ಹಬ್ಬಿಗಿಕ್ಕದೆ ಏನು ನಿರ್ಬಂಧನವಿಲ್ಲದೆ
ಲಭ್ಯವಾಗಿಪ್ಪ ಗರ್ಭದ ಸುಖಿಗಳವರು
ಕರ್ಬುರನಂತೆ ತಿಂದು ಕೊಬ್ಬಿ ತಿರುಗುವಂಗೆ
ದುರ್ಭಾಗ್ಯವಲ್ಲದೆ ಹಬ್ಬವೆನಿಸುವುದೆ
ಕಬ್ಬು ಬಿಲ್ಲಿನಯ್ಯ ವಿಜಯವಿಠ್ಠಲರೇಯ
ದರ್ಭೆ ಏರಿಸಲು ಹಿಬ್ಬರ ಕರವಪಿಡಿವಾ || ೧ ||

ಮಟ್ಠತಾಳ

ಕಾಮಕ್ರೋಧಂಗಳು ಬಿಡುವುದೇ ಬಲು ಹಬ್ಬ
ನೇಮ ನಿತ್ಯವನ್ನೇ ಮಾಡುವುದೇ ಹಬ್ಬ
ತಾಮಸ ಜನರುಗಳ ಬಿಡುವುದೇ ಮಹಾ ಹಬ್ಬ
ಕಾಮನ ಉಪಹತಿಗೆ ಅಂಜುವದೇ ಹಬ್ಬ
ಭೂಮಿಯೊಳಗೆ ಜ್ಞಾನಿಯಾಗುವದೇ ಹಬ್ಬ
ಸ್ವಾಮಿ ಭೃತ್ಯನ್ಯಾಯ ತಿಳಿಯುವದೇ ಮಹಾ ಹಬ್ಬ
ಶ್ರೀ ಮಾರುತಿ ಮತವ ಹಾರೈಪುದೇ ಹಬ್ಬ
ಯಾಮಯಾಮಕ್ಕೆ ಹರಿನಾಮ ನೆನೆವುದೇ ಹಬ್ಬ
ವ್ಯೋಮಗಂಗೆಯ ಜನಕ ವಿಜಯವಿಠ್ಠಲ ಹರಿಯ
ಧಾಮವ ಜಯಸುವದೇ ಧರೆಯೊಳ ಮಹಾ ಹಬ್ಬ || ೨ ||

ತ್ರಿವಿದಿತಾಳ

ಬಂದ ದುರಿತಗಳ ಪೋಗಾಡುವುದೇ ಹಬ್ಬ
ಮಂದಾಕಿನಿಯಲ್ಲಿ ಮಜ್ಜನವೇ ಹಬ್ಬ
ನಿಂದ್ಯಕಾರರ ನಿತ್ಯ ನಿಂದೆ ಮಾಳ್ಪುದೇ ಹಬ್ಬ
ವಂದಿಸಿ ಗುರುಗಳಿಗೆ ಎರಗುವದೇ ಹಬ್ಬ
ಮುಂದೆ ಪುಟ್ಟುವ ಜನನವ ನೀಗಿಕೊಂಬುದೇ ಹಬ್ಬ
ಬಂಧನವಾಗದ ಯೋಚನೆ ಬಲು ಹಬ್ಬ
ತಂದೆ ತಾಯಿಗಳಿಗೆ ಅನುಕೂಲವೇ ಹಬ್ಬ
ಅಂದನಗುತ ಸಂತೋಷವಾಹುದೇ ಹಬ್ಬ
ಕುಂದು ಸಜ್ಜನರಿಗೆ ನುಡಿಯದಿಪ್ಪದೇ ಹಬ್ಬ
ಬಿಂದು ಮಾತುರ ಭೋಗ ಬಯಸದಿಪ್ಪದೇ ಹಬ್ಬ
ಬಂದ ಅತಿಥಿಗಳ ಪೂಜಿಸುವುದೇ ಹಬ್ಬ
ಮಂದಿರದಲ್ಲಿ ಕಲಹವಿಲ್ಲದ್ದೇ ಮಹ ಹಬ್ಬ
ಇಂದು ನಾಳಿಗೆ ಇಂಬೊ ಚಿಂತೆ ಬಿಡುವುದೇ ಹಬ್ಬ
ಸಂದಣೆ ತೊರೆದು ಏಕಾಂತ ವಾಹದೆ ಹಬ್ಬ
ನಿಂದಿದ್ದಖಿಳರೊಳು ನರೆಯದಿಪ್ಪುದೇ ಹಬ್ಬ
ನಿಂದೆ ಬಾರದಂತೆ ಬಾಳುವುದೇ ಹಬ್ಬ
ಇಂದ್ವರ್ಕವುಳ್ಳ ನಕ ವಿಜಯವಿಠಲರೇಯನ
ಒಂದೇ ಭಕುತಿಯಲಿ ಭಜಿಪದೆ ಮಹಾ ಹಬ್ಬ || ೩ ||

ಅಟ್ಟತಾಳ

ಋಣರೂಪವಾಗದ ಸಂಸಾರವೇ ಹಬ್ಬ
ಗುಣವಂತನಾಗಿ ಸಂಚರಿಸುವುದೇ ಹಬ್ಬ
ಕನಸೀಲಿ ಹಣವನ್ನು ಬಯಸದಿಪ್ಪದೇ ಹಬ್ಬ
ಮನವಾಚ ಕಾಯಕ ಬಡತನವೇ ಹಬ್ಬ
ವನಜನಾಭನ ನೋಡಿ ಪಾಡುವುದೇ ಹಬ್ಬ
ದಿನಪ್ರತಿದಿನ ಸತ್ಕರ್ಮಾಚರಣೆ ಹಬ್ಬ
ಮಣಿಕರ್ಣಿಕೆಯಲ್ಲಿ ದೇಹತ್ಯಾಗವೇ ಹಬ್ಬ
ಮನೆ ನೆರೆ ಹೊರೆ ನೋಡಿ ಬಳಲದಿಪ್ಪದೆ ಹಬ್ಬ
ಅನಿಮಿಷ ಜಾಗರ ಹರಿವಾಸರವೇ ಹಬ್ಬ
ತನುವಿಗೆ ವ್ಯಾಧೆ ಬಾರದ್ದೊಂದೇ ಮಹಾ ಹಬ್ಬ
ಚಿನುಮಯ ಮೂರುತಿ ವಿಜಯವಿಠ್ಠಲರೇಯನ
ಮನಸಿನೊಳನುದಿನ ಈಕ್ಷಿಸುವುದೇ ಹಬ್ಬ || ೪ ||

ಆದಿತಾಳ

ಕಾಲನ ಭಾದಿಗೆ ಸಿಲುಕದಿಪ್ಪದೆ ಹಬ್ಬ
ಕಾಲಕಾಲಕೆ ತೀರ್ಥಯಾತ್ರೆ ಮಾಳ್ಪದೆ ಹಬ್ಬ
ಕೇಳುವ ಹರಿಕಥಾ ಶ್ರವಣವೇ ದೊಡ್ಡ ಹಬ್ಬ
ನಾಲಿಗಿಂದಲಿ ಹರಿಯ ಸ್ತೋತ್ರ ಮಾಳ್ಪದೇ ಹಬ್ಬ
ಆಳಾಗಿ ಒಬ್ಬನಲ್ಲಿ ವಶವಾಗದ್ದೊಂದು ಹಬ್ಬ
ಹಾಳು ಹರಟೆ ಬಿಟ್ಟು ಬಿಟ್ಟು ಹೊತ್ತು ಗಳಿಯುವುದೇ ಹಬ್ಬ
ಶ್ರೀಲೋಲ ಪರನೆಂದು ಕೂಗ್ಯಾಡುವದೇ ಹಬ್ಬ
ವಾಲಯಗಯದಲ್ಲಿ ಕುಲಪವಿತ್ರವೇ ಹಬ್ಬ
ಭಾಳಲಿಪಿಗೆ ನೋಯ ಆಡದಿಪ್ಪದೇ ಹಬ್ಬ
ವೇಳೆಗೆ ದೊರೆತದು ಭುಂಜಿಸುವುದೇ ಹಬ್ಬ
ಪಾಲಾಬ್ದಿಶಾಯಿ ನಮ್ಮ ವಿಜಯವಿಠ್ಠಲರೇಯನ
ಊಳಿಗದವನಾಗಿ ವಾಲ್ಗೈಸುವುದೇ ಹಬ್ಬ || ೫ ||

ಜತೆ
ದಂಪತಿಗಳು ಏಕವಾಗಿಪ್ಪುದೇ ಹಬ್ಬ |
ಶಂಪದಂತೆ ವಿಜಯವಿಠ್ಠಲ ಪೊಳೆವುದೇ ಹಬ್ಬ || ೬ ||
***********