ಬಡಿ ಜಾಗಟೆ ಹೊಡಿ ನಗಾರಿ
ಪಿಡಿ ತುತ್ತೂರಿಯನು
ನಡಿ ಮುಂದೆ ಅಡಿ ಇಡು
ಹೆದರದೆ ನುಡಿ ಹರಿಯನಾಮ ||ಪ||
ಬಿಗಿ ನಡುವನು ಮುಗಿ ಕೈಯ್ಯನು
ಒಗಿ ದುರಭಿಮಾನ
ಚಿಗಿ ಭಕ್ತಿರಸ ಮುಖದಲಿ
ನಗಿ ತೋರು ನಯದಿ ||೧||
ಸರಿ ಇಲ್ಲವೀ ಪರಿ ದಾಸ ಕೂಟ
ಪರಿ ಎನ್ನುವ ಜನರ
ಕರಿ ಕುಣಿಸು ಕಾಲ್ಕಿರಿ ಗೆಜ್ಜೆ
ಭರ ಧರಿಯಲ್ಲಿ ಮೆಟ್ಟೆ ||೨||
ಗಟ್ಟಿ ಮಾಡಿ ಮನ ತಟ್ಟಿ ಚಪ್ಪಾಳೆ ತಟ್ಟಿ
ಮೆಟ್ಟಿ ಖಳರ ಎದೆಯ
ಶ್ರೇಷ್ಠ ಮಧ್ವಮತ ಗುಟ್ಟು ದಾಸತ್ವವು
ದುಷ್ಟರರಿಯರೆಂದು ||೩||
ಶುದ್ಧ ಗುರುವು ತಂದೆ ಮುದ್ದುಮೋಹನರು
ಉದ್ಧಾರವನೆ ಮಾಡಿ
ವಿದ್ಯಾನಾಮ ಅನಿರುದ್ಧಾನಂಕಿತಗಳ
ಬದ್ಧಾಗೀವರೆಂದು ||೪||
ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ
ಮುಟ್ಟಿ ಮನದಿ ಭಜಿಸೆ
ಕೆಟ್ಟ ಕರ್ಮಗಳ ಕಟ್ಟು ಹರಿದು
ಮುಕ್ತಿ ಕೊಟ್ಟು ಪೊರೆವನೆಂದು ||೫||
***
Badi jagate hodi nagari
pidi tutturiyanu
nadi munde adi idu
hedarade nudi hariyanama ||pa||
Bigi naduvanu mugi kaiyyanu
ogi durabhimana
chigi bhaktirasa mukhadali
nagi toru nayadi ||1||
Sari illavi pari dasa kuta
pari ennuva janara
kari kunisu kalkiri gejje
bhara dhariyalli mette ||2||
Gatti madi mana tatti chappale tatti
metti khalara edeya
sreshtha madhvamata guttu dasatvavu
dustarariyarendu ||3||
Shuddha guruvu tande muddumohanaru
uddharavane madi
vidyanama aniruddhanankitagala
baddhagivarendu ||4||
Sreshtha gopalakrishnavittalana
mutti manadi bhajise
ketta karmagala kattu haridu
mukti kottu porevanendu ||5||
***
ಬಡಿ ಜಾಗಟೆ ಹೊಡಿ ನಗಾರಿ ಪಿಡಿ ತುತ್ತೂರಿಯನು
ನಡಿ ಮುಂದೆ ಅಡಿ ಇಡು ಹೆದರದೆ ನುಡಿ ಹರಿಯನಾಮ ಪ.
ಬಿಗಿ ನಡುವನು ಮುಗಿ ಕೈಯ್ಯನು ಒಗಿ ದುರಭಿಮಾನ
ಚಿಗಿ ಭಕ್ತಿರಸ ಮುಖದಲಿ ನಗಿ ತೋರು ನಯದಿ 1
ಸರಿ ಇಲ್ಲವೀ ಪರಿ ದಾಸ ಕೂಟ ಪರಿ ಎನ್ನುವ ಜನರ
ಕರಿ ಕುಣಿಸು ಕಾಲ್ಕಿರಿ ಗೆಜ್ಜೆ ಭರ ಧರಿಯಲ್ಲಿ ಮೆಟ್ಟೆ 2
ಗಟ್ಟಿ ಮಾಡಿ ಮನ ತಟ್ಟಿ ಚಪ್ಪಾಳೆ ಮೆಟ್ಟಿ ಖಳರ ಎದÉಯ
ಶ್ರೇಷ್ಠ ಮಧ್ವಮತ ಗುಟ್ಟು ದಾಸತ್ವವು ದುಷ್ಟರರಿಯರೆಂದು 3
ಶುದ್ಧ ಗುರುವು ತಂದೆ ಮುದ್ದುಮೋಹನರು ಉದ್ಧಾರವನೆ ಮಾಡಿ
ವಿದ್ಯಾನಾಮ ಅನಿರುದ್ಧಾನಂಕಿತಗಳ ಬದ್ಧಾಗೀವರೆಂದು 4
ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ಮುಟ್ಟಿ ಮನದಿ ಭಜಿಸೆ
ಕೆಟ್ಟ ಕರ್ಮಗಳ ಕಟ್ಟು ಹರಿದು ಮುಕ್ತಿ ಕೊಟ್ಟು ಪೊರೆವನೆಂದು 5
****