Showing posts with label ಅನಂತಾನಂತ ಪಾಪ ಮಾಡುವೆ ನಾನು vasudeva vittala. Show all posts
Showing posts with label ಅನಂತಾನಂತ ಪಾಪ ಮಾಡುವೆ ನಾನು vasudeva vittala. Show all posts

Friday, 27 December 2019

ಅನಂತಾನಂತ ಪಾಪ ಮಾಡುವೆ ನಾನು ankita vasudeva vittala

by ವ್ಯಾಸತತ್ವಜ್ಞರು

ಅನಂತಾನಂತ ಪಾಪ ಮಾಡುವೆ ನಾನು ||ಪ||

ಅನಂತದಯಾನಿಧೆ ನೀನೋ ಹಯವದನ ||ಅ.ಪ||

ಮೇರು ಮಂದರಾದಿಗಳು ದಾರು ಎನ್ನ ಪಾತಕಕ್ಕೆ
ಸರಿಗಾಣಿಸೆನೆಂದರೆ ಪಾಪ ಕ್ಷೋಣಿ ಪರಮಾಣುಗಳಿಗೆ ||೧||

ಪೇಳು ಪಾಪವೆಂದೆನಲು ಪೇಳಲಿಕ್ಕೆ ಬಲು ಲಜ್ಜೆ-
ಗಳು ಅಂಡಲೆವುತಿದೆ ತಿಳಿದಾತ ನೀನಲ್ಲವೆ ||೨||

ಎನಗೊಂದು ಉಪಾಯವ ಅನಾಯಾಸ ಮಾಡುವಂಥ 
ನಿನ್ನ ನಾಮಸುಧೆಯನ್ನು ಎನಗೀಯೋ ಮುದದಿಂದ ||೩||

ಏಸು ಕಾಲ ಸ್ವಾಮಿ ನೀನು ದಾಸನು ಆಸು ಕಾಲದವನು
ವಾಸುದೇವವಿಠಲನೆ  ನೀ ಸಡಲ ಬಿಡುವರೇನೋ ||೪||
*******